Home Crime ಕೋಟ: ಕೆರೆಯಲ್ಲಿ 80 ವರ್ಷದ ವೃದ್ಧನ ಮೃತದೇಹ ಪತ್ತೆ…!!

ಕೋಟ: ಕೆರೆಯಲ್ಲಿ 80 ವರ್ಷದ ವೃದ್ಧನ ಮೃತದೇಹ ಪತ್ತೆ…!!

ಕೋಟ: 80 ವರ್ಷದ ವೃದ್ಧರೊಬ್ಬರು ನಾಪತ್ತೆಯಾದ ಎರಡು ದಿನಗಳ ಬಳಿಕ ಕೆರೆಯಲ್ಲಿ ಮೃತದೇಹವಾಗಿ ಪತ್ತೆಯಾಗಿರುವ ಘಟನೆ ಬ್ರಹ್ಮಾವರ ತಾಲೂಕಿನ ಮೂಡಹಡು ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಗಣಪ ಮರಕಾಲ (80) ಎಂದು ಗುರುತಿಸಲಾಗಿದೆ.

ಅಕ್ಟೋಬರ್ 28ರಂದು ರಾತ್ರಿ 9 ಗಂಟೆಗೆ ಮನೆಯವರೊಂದಿಗೆ ಊಟ ಮುಗಿಸಿ ಟಿವಿ ನೋಡುತ್ತಿದ್ದ ಗಣಪ ಮರಕಾಲ ಅವರು, ಮರುದಿನ ಬೆಳಗ್ಗೆ 6 ಗಂಟೆಯ ವೇಳೆಗೆ ಮನೆಯಲ್ಲಿ ಕಾಣೆಯಾಗಿದ್ದರು. ಮನೆಯವರು ವಠಾರ, ಸುತ್ತಮುತ್ತಲಿನ ಪ್ರದೇಶ, ನೆರೆಹೊರೆಯವರು ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಈ ಸಂಬಂಧ ಕಾಣೆಯಾದ ಪ್ರಕರಣ ದಾಖಲಾಗಿತ್ತು.

ನಂತರ ತಂದೆಯನ್ನು ಹುಡುಕುತ್ತಿದ್ದ ಕುಟುಂಬಸ್ಥರಿಗೆ ಅಕ್ಟೋಬರ್ 30ರಂದು ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಮೂಡಹಡು ಗ್ರಾಮದ ಹೊಳ್ಕರೆ ಕೆರೆಯಲ್ಲಿ ಗಣಪ ಮರಕಾಲ ಅವರ ಮೃತದೇಹ ಪತ್ತೆಯಾಗಿದೆ.

ಅಕ್ಟೋಬರ್ 28ರ ರಾತ್ರಿ 9 ಗಂಟೆಯಿಂದ ಅಕ್ಟೋಬರ್ 30ರ ಮಧ್ಯಾಹ್ನ 2 ಗಂಟೆಯ ನಡುವಿನ ಅವಧಿಯಲ್ಲಿ ಆಕಸ್ಮಿಕವಾಗಿ ಅಥವಾ ಇನ್ಯಾವುದೋ ಕಾರಣದಿಂದ ಕೆರೆಗೆ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 46/2026, ಕಲಂ 194 ಬಿಎನ್‌ಎಸ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇವರು ಕಳೆದ 10 ವರ್ಷಗಳಿಂದ ಮೂಡಹಡು ಗ್ರಾಮದ ತಮ್ಮ ಮಗಳು ಕವಿತಾ ಅವರ ಮನೆಯಲ್ಲಿ ವಾಸವಾಗಿದ್ದರು.