ಕಾರ್ಕಳ: ಮನೆಯಲ್ಲಿ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು 55 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಮಾಳ ಗ್ರಾಮದಲ್ಲಿ ಅಕ್ಟೋಬರ್ 30ರಂದು ನಡೆದಿದೆ.
ಮೃತರನ್ನು ಮಾಳ ಗ್ರಾಮದ ಜಯರಾಮ ಶೆಟ್ಟಿ (55) ಎಂದು ತಿಳಿಯಲಾಗಿದೆ.
ಇವರು ಕೂಲಿ ಕೆಲಸ ಮಾಡಿಕೊಂಡಿದ್ದು, ಮದ್ಯಪಾನ ಮಾಡುವ ಚಟ ಹೊಂದಿದ್ದರು ಎನ್ನಲಾಗಿದೆ. ಎರಡು ವರ್ಷಗಳ ಹಿಂದೆ ಪತ್ನಿ ಜ್ಯೋತಿ ಅವರು ಬಾವಿಗೆ ಬಿದ್ದು ಮೃತಪಟ್ಟ ಬಳಿಕ ಜಯರಾಮ ಶೆಟ್ಟಿ ಅವರು ಮಾನಸಿಕವಾಗಿ ನೊಂದಿದ್ದರು ಎಂದು ತಿಳಿದುಬಂದಿದೆ.
ಅಕ್ಟೋಬರ್ 30ರಂದು ಬೆಳಗ್ಗಿನಿಂದಲೇ ಮನೆಯಲ್ಲಿ ಗಲಾಟೆ ಮಾಡಿಕೊಂಡಿದ್ದ ಜಯರಾಮ ಶೆಟ್ಟಿ ಅವರು ಎರಡು ಬಾರಿ ಪೇಟೆಗೆ ತೆರಳಿ ಮದ್ಯಪಾನ ಮಾಡಿ ಬಂದಿದ್ದರು. ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಮತ್ತೆ ಮದ್ಯಪಾನ ಮಾಡಲು ಹೊರಟಾಗ ತಂದೆ ಸಂಪ ಶೆಟ್ಟಿ (78) ಅವರು ಪ್ರಶ್ನಿಸಿ ಗದರಿಸಿದ್ದರು.
ಇದರಿಂದ ಜಯರಾಮ ಶೆಟ್ಟಿ ಅವರು ಮನೆಯ ಬೆಡ್ರೂಮ್ಗೆ ತೆರಳಿದ್ದರು.
ಸಂಜೆ 6:30ರ ಸುಮಾರಿಗೆ ಕಾಲೇಜಿನಿಂದ ಮನೆಗೆ ಬಂದ ಮೊಮ್ಮಗಳು ದಿಯಾ ಶೆಟ್ಟಿ ಅವರು ಬೆಡ್ರೂಮ್ಗೆ ಹೋದಾಗ ಜಯರಾಮ ಶೆಟ್ಟಿ ಅವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣ ಬೊಬ್ಬೆ ಹಾಕಿ ಮನೆಯವರಿಗೆ ವಿಷಯ ತಿಳಿಸಿದ್ದು, ಕುಟುಂಬಸ್ಥರು ಪರಿಶೀಲಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



