ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ಸಮೀಪ ಕೆರ್ಗಾಲ್ ಗ್ರಾಮದ ಶಂಕರ ದೇವಾಡಿಗ ಎಂಬವರು ನಾಪತ್ತೆಯಾಗಿರುವ ಘಟನೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಾಪತ್ತೆಯಾದ ಶಂಕರ ದೇವಾಡಿಗ ಅವರ ಪುತ್ರ ಸುಕುಮಾರ್ ದೇವಾಡಿಗ (37) ನೀಡಿದ ದೂರಿನ ಪ್ರಕಾರ, ದಿನಾಂಕ 11-10-2026ರಂದು ಬೆಳಿಗ್ಗೆ ಶಂಕರ ದೇವಾಡಿಗ ಅವರು ಕೆರ್ಗಾಲ್ ಗ್ರಾಮದ ಮೊಗೇರಿಯಲ್ಲಿರುವ ತಮ್ಮ ಮೂಲ ಮನೆಗೆ ಹೋಗಿ ಬರುವುದಾಗಿ ತಿಳಿಸಿ ತೆರಳಿದ್ದರು.
ಬಳಿಕ ಅದೇ ದಿನ ಬೆಳಿಗ್ಗೆ ಸುಮಾರು 11:30ರ ವೇಳೆಗೆ ಮನೆಗೆ ಹೋಗುವುದಾಗಿ ಹೇಳಿ ಅಲ್ಲಿಂದ ತೆರಳಿದ ಅವರು ಮನೆಗೂ ವಾಪಸಾಗದೆ, ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 140/2026ರಂತೆ ಗಂಡಸು ಕಾಣೆ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾದ ಶಂಕರ ದೇವಾಡಿಗ ಅವರ ಪತ್ತೆಗಾಗಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.



