Home Crime ಸೈಬರ್ ವಂಚನೆ : ಮೊಬೈಲ್‌ನಲ್ಲಿ ‘iBazo’ APK ಡೌನ್‌ಲೋಡ್ ಆಗಿ ರೂ. 3.86 ಲಕ್ಷ ಮಾಯ..!

ಸೈಬರ್ ವಂಚನೆ : ಮೊಬೈಲ್‌ನಲ್ಲಿ ‘iBazo’ APK ಡೌನ್‌ಲೋಡ್ ಆಗಿ ರೂ. 3.86 ಲಕ್ಷ ಮಾಯ..!

ಮಂಗಳೂರು: ಮೊಬೈಲ್‌ನಲ್ಲಿ ಅರಿವಿಲ್ಲದೆ ‘iBazo’ ಎಂಬ APK ಫೈಲ್ ಡೌನ್‌ಲೋಡ್ ಆಗಿ, UPI ಮೂಲಕ ಹಂತ ಹಂತವಾಗಿ ರೂ. 3,86,599 ಹಣ ಅಪರಿಚಿತ ಖಾತೆಗಳಿಗೆ ವರ್ಗಾವಣೆಯಾದ ಘಟನೆ ನಡೆದಿದ್ದು, CEN Crime ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರರು ಶ್ರೀ XXXXXX (42). ಇವರು ತಮ್ಮ ವಾಸ್ತವ್ಯದ ಮನೆಯಲ್ಲಿ ತಮ್ಮ ಮೊಬೈಲ್ ಫೋನ್ ಅನ್ನು ಬಳಕೆ ಮಾಡಿಕೊಂಡಿರುವ ಸಮಯದಲ್ಲಿ ತಮ್ಮ ಅರಿವಿಲ್ಲದೆ “iBazo” ಎಂಬ APK ಫೈಲ್ ಡೌನ್‌ಲೋಡ್ ಆಗಿದೆ.

ದಿನಾಂಕ 21-11-2026 ರಿಂದ 25-11-2026 ರವರೆಗೆ ಹಂತ ಹಂತವಾಗಿ ಒಟ್ಟು ರೂ. 3,86,599 ಹಣವು UPI ಮುಖಾಂತರ ಯಾವುದೋ ಅಪರಿಚಿತ ಖಾತೆಗಳಿಗೆ ವರ್ಗಾವಣೆಯಾಗಿರುವುದು ಕಂಡು ಬಂದಿದೆ. ತಾವು ಆನ್‌ಲೈನ್ ಮೂಲಕ ಮೋಸ ಹೋಗಿರುವ ವಿಚಾರ ಅರಿವಾಗಿದೆ.

ಯಾರೋ ಅಪರಿಚಿತ ವ್ಯಕ್ತಿಗಳು “iBazo” ಎಂಬ APK ಫೈಲ್ ಮೂಲಕ ದಿನಾಂಕ 21-11-2026 ರಿಂದ 25-11-2026 ರವರೆಗೆ ಒಟ್ಟು ರೂ. 3,86,599 ಹಣವನ್ನು ಆನ್‌ಲೈನ್ ಮೂಲಕ ಆರೋಪಿತರು ತಮ್ಮ ವಿವಿಧ ಬ್ಯಾಂಕ್ ಖಾತೆಗಳಿಗೆ ಮೋಸದಿಂದ ವರ್ಗಾಯಿಸಿಕೊಂಡು ಆನ್‌ಲೈನ್ ಮೂಲಕ ಮೋಸ, ಸೈಬರ್ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಮಂಗಳೂರು CEN Crime ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.