Home Crime ಉಡುಪಿ: ಮನೆ ಎದುರು ನಿಲ್ಲಿಸಿದ್ದ ಹೊಚ್ಚ ಹೊಸ ಬೈಕ್ ಕಳವು…!!

ಉಡುಪಿ: ಮನೆ ಎದುರು ನಿಲ್ಲಿಸಿದ್ದ ಹೊಚ್ಚ ಹೊಸ ಬೈಕ್ ಕಳವು…!!

ಉಡುಪಿ: ನಗರದ ಸಮೀಪ ಬಾಡಿಗೆ ಮನೆ ಎದುರು ನಿಲ್ಲಿಸಿದ್ದ ಕೇವಲ 2 ವಾರದ ಹಿಂದೆ ಖರೀದಿಸಿದ್ದ ಬಜಾಜ್ ಕಂಪನಿಯ ಮೋಟಾರು ಸೈಕಲ್‌ನ್ನು ಕಳ್ಳರು ಕಳವು ಮಾಡಿಕೊಂಡು ಹೋದ ಘಟನೆ ಕರಾವಳಿ ಬೈಪಾಸ್‌ನಲ್ಲಿ ನಡೆದಿದೆ.

ದೂರುದಾರರು ಶ್ರೀಧರ ಮಾಲತೇಶ ಬಾಳಿಹಳ್ಳಿ (21), ತಂದೆ ಮಾಲತೇಶ, ವಾಸ ಬಿಳಗಲಿ, ಶಕುನವಳ್ಳಿ ಅಂಚೆ, ಸೊರಬ ಎಂದು ತಿಳಿದು ಬಂದಿದೆ.

ಇವರು ಬಜಾಜ್ ಕಂಪನಿಯ ಮೋಟಾರು ಸೈಕಲ್ ಖರೀದಿ ಮಾಡಿ 2 ವಾರ ಆಗಿದ್ದು, ಸದ್ರಿ ಬೈಕನ್ನು ದಿನಾಂಕ 23-11-2026 ರಂದು ರಾತ್ರಿ 8:00 ಗಂಟೆಗೆ ಕರಾವಳಿ ಬೈಪಾಸ್‌ನ ಕಟಿಲೇಶ್ವರಿ ಜನರಲ್ ಸ್ಟೋರ್ ಪಕ್ಕದಲ್ಲಿ ಬಾಡಿಗೆ ಮನೆಯಲ್ಲಿ ನಿಲ್ಲಿಸಿದ್ದರು. ನಂತರ ಕೆಲಸ ಮುಗಿಸಿ ದಿನಾಂಕ 28-11-2026 ರಂದು ಬೆಳಿಗ್ಗೆ 9:00 ಗಂಟೆಗೆ ಬಂದು ನೋಡಿದಾಗ ಬೈಕ್ ಇಟ್ಟ ಸ್ಥಳದಲ್ಲಿ ಇರಲಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಬೈಕ್ ಪತ್ತೆಯಾಗಿಲ್ಲ.

ದಿನಾಂಕ 23-11-2026 ರಂದು ರಾತ್ರಿ 8:00 ಗಂಟೆಯಿಂದ ದಿನಾಂಕ 28-11-2026 ರ ಬೆಳಿಗ್ಗೆ 9:00 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ದೂರುದಾರರ ಬೈಕ್‌ನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.

ಬೈಕಿನ ಚೆಸ್ಸಿ ನಂ MD2A36XX4TG10484, ಇಂಜಿನ್ ನಂ JLXCTG64618 ಆಗಿದ್ದು, ಅದರ ಅಂದಾಜು ಮೌಲ್ಯ ರೂ. 2,13,000 ಆಗಿರಬಹುದು.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೊಲೀಸರು ತನಿಖೆ ನಡೆಸುತ್ತಿದ್ದಾರೆ.