Home Crime ಮಂಗಳೂರು: ತುರ್ತು ಕಾರಣವೆಂದು ಊರಿಗೆ ತೆರಳಿದ ಮನೆಕೆಲಸದ ಯುವತಿ ನಾಪತ್ತೆ…!!

ಮಂಗಳೂರು: ತುರ್ತು ಕಾರಣವೆಂದು ಊರಿಗೆ ತೆರಳಿದ ಮನೆಕೆಲಸದ ಯುವತಿ ನಾಪತ್ತೆ…!!

ಮಂಗಳೂರು: ತುರ್ತು ಕಾರಣದಿಂದ ಸ್ವಂತ ಊರಿಗೆ ತೆರಳುತ್ತಿರುವುದಾಗಿ ತಿಳಿಸಿ ಬಸ್‌ನಲ್ಲಿ ಪ್ರಯಾಣ ಆರಂಭಿಸಿದ್ದ 23 ವರ್ಷದ ಯುವತಿಯೊಬ್ಬರು ನಾಪತ್ತೆಯಾಗಿರುವ ಘಟನೆ ನಡೆದಿದೆ.

ನಾಪತ್ತೆಯಾದ ಯುವತಿಯನ್ನು ಕವಿತಾ ಲಮಾಣಿ (23) ಎಂದು ಗುರುತಿಸಲಾಗಿದೆ. ಇವರು ಕಳೆದ ಒಂದೂವರೆ ವರ್ಷಗಳಿಂದ ಮಂಗಳೂರಿನ ಮೊತಿಶಾಮ್ ಕೆನೋಪಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿರುವ ಶಿಲ್ಪಾ ಜಿ. ಕಾಮತ್ ಅವರ ಮನೆಯಲ್ಲಿ ಮನೆಕೆಲಸ ಮಾಡಿಕೊಂಡಿದ್ದರು.

ನವೆಂಬರ್ 12ರಂದು ಬೆಳಿಗ್ಗೆ ಸುಮಾರು 10 ಗಂಟೆಗೆ ಕವಿತಾ ಅವರು ಶಿಲ್ಪಾ ಅವರ ಪತಿ ಈಶಾನ್ ಪರಶರ್ ಅವರಿಗೆ ಕರೆ ಮಾಡಿ, ತುರ್ತು ಕಾರಣದಿಂದ ಸ್ವಂತ ಊರಿಗೆ ತೆರಳುತ್ತಿದ್ದು, ಈಗಾಗಲೇ ಬಸ್‌ನಲ್ಲಿರುವುದಾಗಿ ತಿಳಿಸಿದ್ದರು.

ಆದರೆ, ಅದೇ ದಿನ ರಾತ್ರಿ ಸುಮಾರು 9 ಗಂಟೆಗೆ ಕವಿತಾ ಅವರ ಸಹೋದರ ಅಜಯ್ ಲಮಾಣಿ ಅವರನ್ನು ಸಂಪರ್ಕಿಸಿ ವಿಚಾರಿಸಿದಾಗ, ಕವಿತಾ ಮನೆಗೆ ತಲುಪಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಬಳಿಕ ಕವಿತಾ ಅವರ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು ಎನ್ನಲಾಗಿದೆ.

ಸ್ನೇಹಿತೆಯರು ಹಾಗೂ ಸಂಬಂಧಿಕರ ಮನೆಗಳಲ್ಲಿ ವಿಚಾರಿಸಿದರೂ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಶಿಲ್ಪಾ ಜಿ. ಕಾಮತ್ ಅವರು ಉರ್ವ ಪೊಲೀಸ್ ಠಾಣೆಗೆ ದೂರು ನೀಡಿ, ನಾಪತ್ತೆಯಾದ ಯುವತಿಯನ್ನು ಪತ್ತೆಹಚ್ಚಿಕೊಡುವಂತೆ ಮನವಿ ಮಾಡಿದ್ದಾರೆ.

ನಾಪತ್ತೆಯಾದ ಯುವತಿಯ ಚಹರೆ:

  • ಹೆಸರು: ಕವಿತಾ ಲಮಾಣಿ (23)
  • ತಂದೆ: ಶಿವಪ್ಪ ಲಮಾಣಿ
  • ಮೂಲ ವಿಳಾಸ: ಬೆವಿನಹಳ್ಳಿ ಗ್ರಾಮ, ಶಿರಬಡಗಿ ಅಂಚೆ, ಸವಣೂರು ತಾಲೂಕು, ಹಾವೇರಿ ಜಿಲ್ಲೆ
  • ಎತ್ತರ: 5.1 ಅಡಿ
  • ಮೈಬಣ್ಣ: ಬಿಳಿ
  • ಮುಖ: ದುಂಡು ಮುಖ
  • ಕೂದಲು: ಉದ್ದನೆಯ ತಲೆಕೂದಲು
  • ಧರಿಸಿದ್ದ ಉಡುಪು: ನೀಲಿ ಬಣ್ಣದ ಚೂಡಿದಾರ್
  • ಮಾತನಾಡುವ ಭಾಷೆಗಳು: ಕನ್ನಡ, ಲಮಾಣಿ, ಹಿಂದಿ

ಯುವತಿಯ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.

ಈ ಸಂಬಂಧ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.