ಹೆಬ್ರಿ : ಉಡುಪಿ ಜಿಲ್ಲೆಯ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಪುರ ಗ್ರಾಮದ ಖಜಾನೆ ಶ್ರೀ ಸಾಯಿ ಅಂಗಡಿಯ ಎದುರು ಸಾರ್ವಜನಿಕ ಸ್ಥಳದಲ್ಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಕ್ಟೋಬರ್ 3ರಂದು ಬೀಟ್ ಸಿಬ್ಬಂದಿಯಿಂದ ಲಭಿಸಿದ ಮಾಹಿತಿಯ ಆಧಾರದ ಮೇಲೆ ಹೆಬ್ರಿ ಪೊಲೀಸರು ಪಂಚರು ಹಾಗೂ ಸಿಬ್ಬಂದಿಯೊಂದಿಗೆ ಸಂಜೆ 3.45ರ ಸುಮಾರಿಗೆ ದಾಳಿ ನಡೆಸಿದ್ದಾರೆ.
ಈ ವೇಳೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಜಯ ಪ್ರಕಾಶ್ ಶೆಟ್ಟಿ (66), ಶಿವಪುರ ಗ್ರಾಮ, ಹೆಬ್ರಿ ತಾಲೂಕು ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.
ದಾಳಿಯ ವೇಳೆ ಒರಿಜಿನಲ್ ಚಾಯ್ಸ್ 180 ಎಂಎಲ್‌ನ 48 ಟೆಟ್ರಾ ಪ್ಯಾಕೆಟ್‌ಗಳು, 90 ಎಂಎಲ್‌ನ 48 ಪ್ಯಾಕೆಟ್‌ಗಳು, ಮೈಸೂರು ಲ್ಯಾಸ್ಸರ್ 180 ಎಂಎಲ್‌ನ 24 ಪ್ಯಾಕೆಟ್‌ಗಳು, ಬ್ಯಾಗ್‌ಪೈಪರ್ ವಿಸ್ಕಿಯ 180 ಎಂಎಲ್‌ನ 2 ಪ್ಯಾಕೆಟ್‌ಗಳು ಹಾಗೂ ಒರಿಜಿನಲ್ ಚಾಯ್ಸ್ 90 ಎಂಎಲ್‌ನ 4 ಪ್ಯಾಕೆಟ್‌ಗಳು ಸೇರಿದಂತೆ ಒಟ್ಟು ₹11,090 ಮೌಲ್ಯದ ಮದ್ಯ ಹಾಗೂ ಇತರ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದರ ಜೊತೆಗೆ ಮದ್ಯ ಮಾರಾಟದಿಂದ ಸಂಗ್ರಹಿಸಿದ್ದ ₹220 ನಗದನ್ನೂ ವಶಕ್ಕೆ ಪಡೆಯಲಾಗಿದೆ.ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.



