Home Crime ಬೈಂದೂರು: ಬಸ್‌ ಹಾದುಹೋದ ವಿಚಾರಕ್ಕೆ ಗಲಾಟೆ : ಮಹಿಳೆ ಮೇಲೆ ಕಲ್ಲಿನಿಂದ ಹಲ್ಲೆ…!!

ಬೈಂದೂರು: ಬಸ್‌ ಹಾದುಹೋದ ವಿಚಾರಕ್ಕೆ ಗಲಾಟೆ : ಮಹಿಳೆ ಮೇಲೆ ಕಲ್ಲಿನಿಂದ ಹಲ್ಲೆ…!!

ಬೈಂದೂರು: ಬಸ್‌ ಹಾದುಹೋದ ವಿಚಾರಕ್ಕೆ ಸಂಬಂಧಿಸಿ ಮಹಿಳೆಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಹಲ್ಲೆ ಮಾಡಿರುವ ಘಟನೆ ಕಂಬದಕೋಣೆ ಬಸ್‌ ನಿಲ್ದಾಣದಲ್ಲಿ ನಡೆದಿದೆ.

ಸೆಪ್ಟೆಂಬರ್ 21ರಂದು ರಾತ್ರಿ 9.30ರ ಸುಮಾರಿಗೆ ಹೇರಂಜಾಲು ಗ್ರಾಮದ ಚಂದ್ರಕಲಾ (51) ಅವರು ಕಂಬದಕೋಣೆ ಬಸ್‌ ನಿಲ್ದಾಣದಲ್ಲಿ ನಿಂತು ಫೋನ್‌ನಲ್ಲಿ ಮಾತನಾಡುತ್ತಿದ್ದರು.

ಈ ವೇಳೆ ಅವರ ಸಮೀಪದಲ್ಲೇ ಬಸ್‌ವೊಂದು ಹಾದುಹೋಗಿದ್ದು, ಇದರಿಂದ ಗಾಬರಿಗೊಂಡ ಚಂದ್ರಕಲಾ ಅವರು ಬಸ್‌ನವರಿಗೆ ಬೈಯುತ್ತಿದ್ದರು ಎನ್ನಲಾಗಿದೆ.

ಈ ಸಂದರ್ಭ ಅಲ್ಲಿಗೆ ಬಂದ ಕಂಬದಕೋಣೆ ನಿವಾಸಿಗಳಾದ ರೇಷ್ಮಾ ಹಾಗೂ ಅವರ ಅಕ್ಕನ ಮಗ, ಚಂದ್ರಕಲಾ ಅವರಿಗೆ ವಿನಾಕಾರಣ ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.