Home Crime ವೇಣೂರು: ಅಕ್ರಮ ಕೋಳಿ ಅಂಕ : 2 ಮಂದಿ ವಶಕ್ಕೆ : 27 ಮಂದಿ ವಿರುದ್ಧ...

ವೇಣೂರು: ಅಕ್ರಮ ಕೋಳಿ ಅಂಕ : 2 ಮಂದಿ ವಶಕ್ಕೆ : 27 ಮಂದಿ ವಿರುದ್ಧ ಪ್ರಕರಣ…!!

ವೇಣೂರು: ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು ಬಡಕೋಡಿ ಗ್ರಾಮದ ಕಿರಿಂಬಿ ಸರ್ಕಾರಿ ಕೆರೆ ಬಳಿ ಅಕ್ರಮ ಕೋಳಿ ಅಂಕ (ಕೋಳಿ ಜೂಜಾಟ) ನಡೆಸುತ್ತಿದ್ದ ಅಡ್ಡೆ ಮೇಲೆ ವೇಣೂರು ಪೊಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದು, ಪರಾರಿಯಾದ 25 ಮಂದಿ ಸೇರಿ ಒಟ್ಟು 27 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ದಿನಾಂಕ 20/09/2026 ರಂದು ಸಂಜೆ 4:15 ಗಂಟೆಗೆ ಬೀಟ್ ಸಿಬ್ಬಂದಿ PC 612 ಪುಂಡಲಿಕಪ್ಪ ಅವರಿಗೆ ಬಡಕೋಡಿ ಕಿರಿಂಬಿಯಲ್ಲಿ ಅಕ್ರಮ ಕೋಳಿ ಅಂಕ ನಡೆಯುತ್ತಿರುವ ಮಾಹಿತಿ ಬಂದಿತ್ತು. ಕೂಡಲೇ PSI ಅಕ್ಷಯ ಡವಗಿ ಅವರು ಸಿಬ್ಬಂದಿಗಳೊಂದಿಗೆ ಸಂಜೆ 4:30ಕ್ಕೆ ಸ್ಥಳಕ್ಕೆ ದಾಳಿ ನಡೆಸಿದ್ದಾರೆ.

ಸ್ಥಳದಲ್ಲಿ 25-30 ಜನರು ಗುಂಪು ಸೇರಿದ್ದು, ಕೋಳಿಗಳ ಕಾಲಿಗೆ ಹರಿತವಾದ ಬಾಲು ಕತ್ತಿ ಕಟ್ಟಿ ಎದುರು ಬದುರು ಬಿಟ್ಟು ಹಿಂಸಾತ್ಮಕವಾಗಿ ಕಾದಾಡಿಸುತ್ತಿದ್ದರು. ಪೊಲೀಸರನ್ನು ಕಂಡು ಆರೋಪಿಗಳು ಕೋಳಿಗಳ ಸಮೇತ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ.

ವಶಕ್ಕೆ ಪಡೆದ ಆರೋಪಿಗಳು ಸುನೀಲ್ – ಬಡಕೋಡಿ ಗ್ರಾಮ,ವಿಶ್ವನಾಥ (36) – ಪೆರಿಂಜೆ, ಹೊಸಂಗಡಿ ಎಂದು ಗುರುತಿಸಲಾಗಿದೆ.

ಪರಾರಿಯಾದ ಆರೋಪಿಗಳು ಸಂಪತ್, ಸುಶಾನ್, ಪ್ರಶಾಂತ್, ಭರತ್, ಹರೀಶ್, ಸುರೇಂದ್ರ, ಇಬ್ರಾಹಿಂ, ಶಾಹಿದ್, ನಾಗೇಶ್, ಸತೀಶ್, ಶಿವಾನಂದ, ಪ್ರದೀಪ್, ಕಿರಣ್, ದೀಕ್ಷಿತ್, ಸತೀಶ್, ಲೋಕೇಶ್, ಗಣೇಶ್ ಮಡಿವಾಳ, ಹರೀಣ್ ಸುವರ್ಣ್, ಸುನೀಲ್ ಮೂಡುಕೋಡಿ, ನಿತ್ಯಾನಂದ, ಶಿವಪ್ರಸಾದ್, ಮಹೇಶ್, ಪ್ರವೀಣ್ ಕುಮಾರ್, ಸುದೀಕ್ಷ್ ಸೇರಿ ಇತರರು ಎಂದು ತಿಳಿದುಬಂದಿದೆ.

ವಶಪಡಿಸಿಕೊಂಡ ವಸ್ತುಗಳು ಸ್ಥಳದಲ್ಲಿ ಗಿಡಗಂಟಿಗಳಿಗೆ ಕಟ್ಟಿದ್ದ 4 ಹುಂಜ ಕೋಳಿಗಳು (ಒಂದರ ಕಾಲಿಗೆ ಬಾಲು ಕತ್ತಿ),ರಕ್ತ ಮತ್ತು ರೆಕ್ಕೆ ಪುಕ್ಕಗಳ ಕುರುಹುಗಳು,ಸ್ಥಳದಿಂದ 50 ಮೀ. ದೂರದಲ್ಲಿ ನಿಲ್ಲಿಸಿದ್ದ 17 ದ್ವಿಚಕ್ರ ವಾಹನಗಳು ಎಂದು ತಿಳಿಯಲಾಗಿದೆ.

ವಾಹನಗಳ ನಂಬರ್ KA 19 EQ 4154, KA 21 X 8680, KA 21 L 1890, KA 20 ED 8767, KA 19 EU 2582, KA 19 EW 0627, KA 21 X 7070, KA 19 HS 6538, KA 21 X 5234, KA 21 S 6766, KA 19 HH 8377, KA 70 E 9317, KA 20 J 6770, KA 70 J 8699, KA 19 HB 0976, KA 21 V 6290, KA 19 ET 0928.

ಈ ಬಗ್ಗೆ ವೇಣೂರು ಪೊಲೀಸ್ ಠಾಣೆ ಅ.ಕ್ರ 69/2026 ಕಲಂ 87, 93 KP Act, ಕಲಂ 3, 11(1)(m)(ii), 11(1)(n) ಪ್ರಾಣಿ ಹಿಂಸೆ ತಡೆ ಕಾಯ್ದೆ 1960 ಮತ್ತು ಕಲಂ 112 BNS 2023 ರಂತೆ ಪ್ರಕರಣ ದಾಖಲಾಗಿದೆ.