Home Crime ಆದಿ ಉಡುಪಿ ಕುರಿ ಮಾರುಕಟ್ಟೆಯಲ್ಲಿ ಮಾಂಸದ ತ್ಯಾಜ್ಯದಿಂದ ದುರ್ವಾಸನೆ : ಸ್ಥಳೀಯರ ಆಕ್ರೋಶ…!!

ಆದಿ ಉಡುಪಿ ಕುರಿ ಮಾರುಕಟ್ಟೆಯಲ್ಲಿ ಮಾಂಸದ ತ್ಯಾಜ್ಯದಿಂದ ದುರ್ವಾಸನೆ : ಸ್ಥಳೀಯರ ಆಕ್ರೋಶ…!!

ಉಡುಪಿ: ಆದಿ ಉಡುಪಿ ಕುರಿ ಮಾರುಕಟ್ಟೆಯಲ್ಲಿ ಮಾಂಸದ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದೇ ಇರುವ ಆರೋಪ ಕೇಳಿಬಂದಿದೆ.

ತ್ಯಾಜ್ಯವನ್ನು ಸ್ಥಳದಲ್ಲೇ ಶೇಖರಿಸಿರುವುದರಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ದುರ್ವಾಸನೆ ಬೀರುತ್ತಿದ್ದು, ನೊಣಗಳ ಕಾಟವೂ ಹೆಚ್ಚಾಗಿದೆ ಎಂದು ಸ್ಥಳೀಯ ನಿವಾಸಿಗಳು ಹಾಗೂ ಅಂಗಡಿ ಮಾಲೀಕರು ದೂರಿದ್ದಾರೆ.

ಮಾಂಸದ ತ್ಯಾಜ್ಯದಿಂದಾಗಿ ಪರಿಸರ ಮಾಲಿನ್ಯ ಉಂಟಾಗುವುದರ ಜೊತೆಗೆ, ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಆತಂಕವೂ ಮೂಡಿದೆ. ಮಾರುಕಟ್ಟೆಯ ಪಕ್ಕದಲ್ಲೇ ಆಹಾರ ಸರಬರಾಜು ಅಂಗಡಿ ಇರುವುದರಿಂದ ಅಲ್ಲಿಗೆ ಬರುವ ಗ್ರಾಹಕರಿಗೂ ತೊಂದರೆಯಾಗುತ್ತಿದೆ ಎನ್ನಲಾಗಿದೆ.

ಮಾಂಸದ ತ್ಯಾಜ್ಯವನ್ನು ನಿಯಮಾನುಸಾರ ವಿಲೇವಾರಿ ಮಾಡಿ, ಸ್ವಚ್ಛತೆ ಕಾಪಾಡುವಂತೆ ಸಂಬಂಧಪಟ್ಟ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಹಾಗೂ ಅಂಗಡಿ ಮಾಲೀಕರು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದ ಎಚ್ಚರಿಕೆ ನೀಡಿದ್ದಾರೆ.