Home Crime ಬಂಟ್ವಾಳ: ಮನೆಗೆ ನುಗ್ಗಿ ಚಿನ್ನಾಭರಣ ನಗದು ಕಳವು…!!

ಬಂಟ್ವಾಳ: ಮನೆಗೆ ನುಗ್ಗಿ ಚಿನ್ನಾಭರಣ ನಗದು ಕಳವು…!!

ಬಂಟ್ವಾಳ : ಮನೆಯಲ್ಲಿ ಯಾರೂ ಇಲ್ಲದ ವೇಳೆಗೆ ಮನೆಗೆ ನುಗ್ಗಿದ ಕಳ್ಳರು 40 ಸಾವಿರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳವು ಮಾಡಿದ ಘಟನೆ ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದಲ್ಲಿ ಸಂಭವಿಸಿದೆ.

ಸಜೀಪಮುನ್ನೂರು ಗ್ರಾಮದ ಪ್ರಪುಲ್ಲಾ ಜಾನೆಟ್ ಡಿ’ಕ್ರೂಸ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ.

ಸೆ.14ರಂದು ಸಂಜೆ ಇವರು ಮಕ್ಕಳೊಂದಿಗೆ ಬೆಳ್ಳಾರೆಗೆ ಹೋಗಿದ್ದರು. ಸೆ.15ರಂದು ಬೆಳಗ್ಗೆ ವಾಪಸ್ ಬಂದು ಮನೆಯೊಳಗೆ ಹೋದಾಗ ಮನೆಯ ಬೆಡ್ ರೂಮಿನ ಮಂಚದಲ್ಲಿದ್ದ ಬೆಡ್ ನ್ನು ಸರಿಸಿದ್ದು ಕಂಡು ಬಂದಿದೆ. ರೂಮಿನ ಒಳಗಿನ ವಾರ್ಡ್ ರೂಬ್ ನ ಬಾಗಿಲನ್ನು ತೆರೆದು ಬಟ್ಟೆಗಳನ್ನು ಚೆಲ್ಲಾ ಪಿಲ್ಲಿ ಮಾಡಿದ್ದು ಕಂಡು ಬಂದಿದ್ದು ಕಳ್ಳತನ ಆಗಿರುವ ಅಂಶ ಬೆಳಕಿಗೆ ಬಂದಿದೆ. ವಾರ್ಡ್ ರೂಬ್ ನಲ್ಲಿ ಇಟ್ಟಿದ್ದ ಸುಮಾರು 4 ಗ್ರಾಂ ತೂಕದ 2 ಜತೆ ಚಿನ್ನದ ಕಿವಿಯೋಳೆ ಕಳವಾಗಿದೆ.

ಕಳವಾದ ಚಿನ್ನದ ಬೆಲೆ 40,000 ರೂ. ಎಂದು ಅಂದಾಜಿಸಲಾಗಿದೆ. ಜತೆಗೆ ಮನೆಯ ಸೋಪಾದಲ್ಲಿ ಡಬ್ಬದಲ್ಲಿ ಇಟ್ಟಿದ್ದ ನಗದು 5000 ರೂ. ಕಳವಾಗಿದೆ.

ಮನೆಯ ಇನ್ನೊಂದು ವಾರ್ಡ್ ರೂಬ್ ನ ಬಾಗಿಲನ್ನು ತೆರೆದು ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಅಲ್ಲಿಯೂ ಹುಡುಕಾಟ ನಡೆಸಿದ್ದಾರೆ. ಮನೆಯ ಹಿಂಬದಿ ವರ್ಕ್ ಏರಿಯಾದಲ್ಲಿದ್ದ ಕಬ್ಬಿಣದ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದು, ನಂತರ ಮನೆಯ ಹಿಂಬದಿಗೆ ಅಳವಡಿಸಿದ ಮರದ ಬಾಗಿಲನ್ನು ಮುರಿದು ಕಳ್ಳರು ಮನೆಯ ಒಳಪ್ರವೇಶಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.