Home Karkala News ಕಂಬಳ ಓಟದ ತರಬೇತಿ ಶಿಬಿರಕ್ಕೆ ಶಾಸಕ ಸುನೀಲ್ ಕುಮಾರ್ ಚಾಲನೆ…!!

ಕಂಬಳ ಓಟದ ತರಬೇತಿ ಶಿಬಿರಕ್ಕೆ ಶಾಸಕ ಸುನೀಲ್ ಕುಮಾರ್ ಚಾಲನೆ…!!

ಕಾರ್ಕಳ : ಕಾರ್ಕಳ ಮಿಯ್ಯಾರು ಲವ ಕುಶ ಜೋಡುಕೆರೆ ಕಂಬಳ ಕ್ರೀಡಾಂಗಣದಲ್ಲಿ ಕರ್ನಾಟಕ ಯುವಜನ ಮತ್ತು ಕ್ರೀಡಾ ಪ್ರಾಧಿಕಾರದಿಂದ ಮಾನ್ಯತೆ ಪಡೆದ ರಾಜ್ಯ ಕಂಬಳ ಅಸೋಸಿಯೇಷನ್ (ರಿ ) ಹಾಗೂ ಜಿಲ್ಲಾ ಕಂಬಳ ಸಮಿತಿ (ರಿ) ಇವರ ಸಂಯುಕ್ತ ಆಶ್ರಯದಲ್ಲಿ ಪ್ರಥಮ ವರ್ಷದ ಕಂಬಳ ಓಟದ ತರಬೇತಿ ಶಿಬಿರಯನ್ನು ಮಾಜಿ ಸಚಿವ ಶಾಸಕ ವಿ ಸುನೀಲ್ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿ ರಾಜ್ಯ ಕಂಬಳ ಸಮಿತಿ ಧ್ವಜಾರೋಹಣಗೈದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು,
ಕಂಬಳ ದಿನದಿಂದ ದಿನಕ್ಕೆ ಕಂಬಳ ಪ್ರಸಿದ್ಧ ಪಡೆಯುತ್ತಿದ್ದು ಕಂಬಳದ ಕೋಣಗಳ ಸಂಖ್ಯೆ, ಕೋಣಗಳ ಯಜಮಾನರ ಸಂಖ್ಯೆ ಕೂಡಾ ಜಾಸ್ತಿಯಾಗಿದೆ. ಅದೇ ಪ್ರಮಾಣದಲ್ಲಿ ಕಂಬಳ ಓಟಗಾರರ ಸಂಖ್ಯೆ ಕೂಡಾ ಜಾಸ್ತಿಯಾಗಬೇಕಿದೆ. ಆ ನಿಟ್ಟಿನಲ್ಲಿ ರಾಜ್ಯ ಕಂಬಳ ಅಸೋಸಿಯೇಷನ್ ಕಂಬಳ ಓಟಗಾರರ ತರಬೇತಿ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.

ಸುಮಾರು 214 ಕಂಬಳ ಓಟದ ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕಂಬಳ ಓಟದ ತರಬೇತಿ ಶಿಬಿರದ ಸಂರಕ್ಷಕರಾದ ಎರ್ಮಾಳ್ ರೋಹಿತ್ ಕುಮಾರ್ ಹೆಗ್ಡೆ, ಪ್ರವೀಣ್ಚಂದ್ರ ಆಳ್ವ, ಯೋಗೀಶ್ ಶೆಟ್ಟಿ, ಸಂದೀಪ್ ಶೆಟ್ಟಿ, ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಟ್ರಸ್ಟಿ ಸುನೀಲ್ ಕುಮಾರ್ ಬಜಗೋಳಿ, ಎ ಪಿ ಎಂ ಸಿ ಹಾಗೂ ಕುಕ್ಕುಂದೂರು ಪಂಚಾಯತ್ ಮಾಜಿ ಅಧ್ಯಕ್ಷ ಅಂಥೋನಿ ಡಿಸೋಜ ನಕ್ರೆ, ರಾಜ್ಯ ಕಂಬಳ ಸಮಿತಿ ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ, ಶೈಲೇಶ್ ಅರಿಗ ಹಿನಪ್ಪಾಡಿ, ದಿವಾಕರ್ ಜೈನ್, ಕಿರಣ್ ಬಲಿಪ, ವಿಶ್ವನಾಥ್ ಶೆಟ್ಟಿ, ಚಂದ್ರಹಾಸ ಸಾಧು ಸನಿಲ್, ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನ ಮುಕ್ತೇಸರ ತಾರಾನಾಥ್ ಕೋಟ್ಯಾನ್, ತರಬೇತುದಾರರಾದ ಶಾಂತರಾಮ್, ವಸಂತ್ ಜೋಗಿ, ಅಶೋಕ್ ಕುಮಾರ್ ಜೈನ್ ಈದು, ದಿನೇಶ್ ಕಕ್ಕೆಪದವು, ವಿದ್ಯಾದರ್ ಉಪಸ್ಥಿತರಿದ್ದರು.