Home Crime ಉಡುಪಿ: ಮಹಿಳೆಗೆ ಪತಿಯಿಂದ ಕಿರುಕುಳ; ಪ್ರಕರಣ ದಾಖಲು..!!

ಉಡುಪಿ: ಮಹಿಳೆಗೆ ಪತಿಯಿಂದ ಕಿರುಕುಳ; ಪ್ರಕರಣ ದಾಖಲು..!!

ಉಡುಪಿ: ಮಹಿಳೆಯೋರ್ವರಿಗೆ ಆಕೆಯ ಪತಿ ಹಾಗೂ ಮನೆಯವರು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಿರುಕುಳಕ್ಕೊಳಗಾದ ಮಹಿಳೆ ಉತ್ತರ ಪ್ರದೇಶ ಮೂಲದ ಪ್ರದೀಪ್ತ ಸಿಂಗ್(36) ಎಂದು ತಿಳಿದು ಬಂದಿದೆ.

ಪ್ರದೀಪ್ತ ಸಿಂಗ್ 2018ರಲ್ಲಿ ವಿಶಾಲ್ ಸಿಂಗ್ ಎಂಬಾತನ ಜೊತೆ ಮದುವೆ ಯಾಗಿದ್ದು, ನಂತರ ಉಡುಪಿಯ ವಸತಿ ಸಮುಚ್ಚಯದಲ್ಲಿ ವಾಸವಾಗಿದ್ದರು. ನಂತರದ ದಿನಗಳಲ್ಲಿ ವಿಶಾಲ್ ಸಿಂಗ್ ಮದ್ಯಪಾನ ಹಾಗೂ ಧೂಮಪಾನ ಮಾಡಿಕೊಂಡು ಮನೆಗೆ ಬಂದು, ಪ್ರದೀಪ್ತ ಸಿಂಗ್‌ಗೆ ದೈಹಿಕ ಹಲ್ಲೆ ಮಾಡುತ್ತಿದ್ದನು ಎಂದು ಆರೋಪಿಸಲಾಗಿದೆ.

ಮನೆಯವರಿಂದ ಹಣವನ್ನು ತರಬೇಕೆಂದು ಮತ್ತು ಮಗುವಿನ ಖರ್ಚಿಗೆ ಹಣವನ್ನು ಕೇಳುವಂತೆ ಒತ್ತಾಯ ಮಾಡುತ್ತಿದ್ದನು ಎಂದು ದೂರಲಾಗಿದೆ.

ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಬೆದರಿಕೆ ಹಾಕುತ್ತಿದ್ದನು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅದೇ ರೀತಿ ವಿಶಾಲ್ ಸಿಂಗ್‌ನ ತಾಯಿ ಮೀರಾ ಸಿಂಗ್, ತಂದೆ ರಾಕೇಶ್ ಸಿಂಗ್, ಅಣ್ಣ ವಿಕಾಶ್ ಸಿಂಗ್, ಅವರ ಪತ್ನಿ ಕನಕ ಸಿಂಗ್ ಸೇರಿ ಪ್ರದೀಪ್ತ ಸಿಂಗ್‌ಗೆ ತವರು ಮನೆಯಿಂದ ಹಣ ತರುವಂತೆ ಬೇಡಿಕೆಯನ್ನು ಇಡುತ್ತಿದ್ದರು ಮತ್ತು ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.