Home Latest ಮೂಡುಬೆಳ್ಳೆ-ಜ್ಞಾನಗಂಗಾ ಪದವಿ ಪೂರ್ವ ಕಾಲೇಜು ನೆಲ್ಲಿಕಟ್ಟೆ ರಾಷ್ಟ್ರೀಯ ಸೇವಾ ಯೋಜನೆಯ 10ನೇ ವರ್ಷದ ವಾರ್ಷಿಕ ವಿಶೇಷ...

ಮೂಡುಬೆಳ್ಳೆ-ಜ್ಞಾನಗಂಗಾ ಪದವಿ ಪೂರ್ವ ಕಾಲೇಜು ನೆಲ್ಲಿಕಟ್ಟೆ ರಾಷ್ಟ್ರೀಯ ಸೇವಾ ಯೋಜನೆಯ 10ನೇ ವರ್ಷದ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ..!!

ಮೂಡುಬೆಳ್ಳೆ-ಜ್ಞಾನಗಂಗಾ ಪದವಿ ಪೂರ್ವ ಕಾಲೇಜು ನೆಲ್ಲಿಕಟ್ಟೆ ಮೂಡುಬೆಳ್ಳೆ ( ಜಿಐಇ- ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿ. ಉಡುಪಿ ಇದರ ಅಂಗ ಸಂಸ್ಥೆ) ಇಲ್ಲಿ ನನ್ನ ಭಾರತಕ್ಕಾಗಿ ಯುವ ಜನತೆ ಎಂಬ ಘೋಷ ವಾಕ್ಯದೊಂದಿಗೆ ನಡೆದ ರಾಷ್ಟ್ರೀಯ ಸೇವಾ ಯೋಜನೆಯ 10ನೇ ವರ್ಷದ ವಾರ್ಷಿಕ ವಿಶೇಷ ಶಿಬಿರ 2026 ಇದರ ಉದ್ಘಾಟನೆಯು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮರ್ಣೆ ಇಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟಕರಾದ ಸನ್ಮಾನ್ಯ ಶ್ರೀ ಗುರ್ಮೆ ಸುರೇಶ್ ಶೆಟ್ಟಿ ಶಾಸಕರು ವಿಧಾನಸಭಾ ಕ್ಷೇತ್ರ ಕಾಪು ಇವರು ಅಲ್ಪ ಮಾನವನನ್ನು ವಿಶ್ವಮಾನವನನ್ನಾಗಿಸಿ ಶಿಖರದ ಎತ್ತರಕ್ಕೆ ಏರಿಸಬೇಕು. ಆಚಾರ ವಿಚಾರ ನಡೆನುಡಿಗಳಲ್ಲಿ ಬದಲಾವಣೆ ತರಬೇಕು. ಮನುಷ್ಯರಾಗಿ ಬದುಕುವ ಕಲೆಯನ್ನು ರೂಡಿಸಿಕೊಳ್ಳಬೇಕು. ಮಕ್ಕಳಲ್ಲಿ ಸಾಮರಸ್ಯ ಅರಳಿಸಿ ಶಿಕ್ಷಕರು ಯಾವಾಗಲೂ ಮಕ್ಕಳಿಗೆ ಬದುಕನ್ನು ಕಟ್ಟಿಕೊಡುವ
ಕೆಲಸ ಮಾಡುತ್ತಾರೆ ಎಂದು ವಿದ್ಯಾರ್ಥಿಗಳೆಲ್ಲರಿಗೂ ತಿಳಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಶ್ರೀ ಯಾದವ ದೇವಾಡಿಗ ಅಧ್ಯಕ್ಷರು ಜನರಲ್ ಇನ್ಸುರೆನ್ಸ್ ಎಂಪ್ಲಾಯಿಸ್ ಕ್ರೆಡಿಟ್ ಕಾರ್ಪೊರೇಟಿವ್ ಸೊಸೈಟಿ ಉಡುಪಿ ಹಾಗೂ ಜ್ಞಾನಗಂಗಾ ಪದವಿ ಪೂರ್ವ ಕಾಲೇಜು ಮೂಡುಬೆಳ್ಳೆ ಇವರು ಸಹಯೋಗ, ಸಹಕಾರ, ಜ್ಞಾನದ ಹಸಿವು ಇದ್ದಲ್ಲಿ ಅನುಭವವಿರುತ್ತದೆ. ಅಂಕಗಳ ಜೊತೆಗೆ ಜೀವನದ ಮೌಲ್ಯಗಳನ್ನು ಕಲಿಯಬೇಕು. ಮೊಬೈಲ್ ನ ಸಾಧಕ, ಬಾಧಕಗಳನ್ನು ತಿಳಿಸಿ ಬದಲಾವಣೆ ಹೇಗೆ ಹೊಂದಿಕೊಳ್ಳಬೇಕು ಎಂದು ಹೇಳಿದರು. ಸಾಧನೆಯೆಡೆಗೆ ಮುಂದುವರಿಯಬೇಕೆಂದು ವಿದ್ಯಾರ್ಥಿಗಳನ್ನು ಎಚ್ಚರಿಸಿದರು.

ಇಂದಿನ ನಮ್ಮ ಕಾರ್ಯಕ್ರಮದಲ್ಲಿ ಸನ್ಮಾನಗೊಂಡ
ಉಡುಪಿಯ ಹೆಮ್ಮೆಯ ಕಲಾ ಚೇತನ ಉಡುಪಿ ರಾಜೋತ್ಸವ ಪ್ರಶಸ್ತಿ ಪುರಸ್ಕೃತರು ಶ್ರೀ ಮಹೇಶ್ ಮರ್ಣೆ ಅವರು ಯುವಶಕ್ತಿಗೆ ಮಾರ್ಗದರ್ಶನ ನೀಡುವ ಸ್ಪೂರ್ತಿಯ ನುಡಿಗಳನ್ನು ಆಡಿದರು.

ಕಾರ್ಯಕ್ರಮದ ಅಭ್ಯಾಗತರಾದ
ಶ್ರೀ ರಾಘವೇಂದ್ರ ವರ್ಣೇಕರ್ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಉಡುಪಿ ಸಾಧನೆ ಮಾಡುವ ವ್ಯಕ್ತಿಗಳ ಬಗ್ಗೆ ತಿಳಿಯುವ ಬದಲು ಸಾಮಾಜಿಕ ಜಾಲತಾಣಗಳ ಬಲೆಗೆ ಬಿದ್ದ ಯುವ ಪೀಳಿಗೆ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಅದನ್ನು ಮೊದಲು ಅರಿತು ವಿದ್ಯಾರ್ಥಿಗಳು ತಮ್ಮ ಸರ್ವಾಂಗೀಣ ಅಭಿವೃದ್ಧಿಗೆ ಎನ್ ಎಸ್ ಎಸ್ ಘಟಕದ ಮೂಲಕ ಸಹಕಾರ ಪಡೆಯಬೇಕು ಎಂದು ತಿಳಿಸಿದರು.

ಶ್ರೀ ದಯಾನಂದ ನಾಯಕ್ ಸಂಚಾಲಕರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮರ್ಣೆ ಇವರು ಪರಿಸರ ಸಂರಕ್ಷಣೆ, ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗಳು, ಪ್ರಕೃತಿ ವಿಕೋಪ ಎದುರಿಸುವ ಸಾಮರ್ಥ್ಯ ಹೊಂದಿ ನಿರಂತರ ಚಲನೆ ಕ್ರಿಯಾಶೀಲತೆಯ ಕುರಿತು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.

ಶ್ರೀ ನಿರಂಜನ ಬೆಳ್ಳೆ ಉದ್ಯಮಿ ಮೂಡುಬೆಳ್ಳೆ ಇವರು ಸಾಮಾಜಿಕ ಸೇವೆಯ ವ್ಯಕ್ತಿತ್ವವನ್ನು ವಿಕಸಿಸಬೇಕೆಂದು ವಿದ್ಯಾರ್ಥಿಗಳಿಗೆ ಹೇಳಿದರು.

ಶ್ರೀ ಬೆಳ್ಳೆ ಶಿವಾಜಿ ಎಸ್ ಸುವರ್ಣ ಅಧ್ಯಕ್ಷರು ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಬೆಳ್ಳೆ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಎನ್ ಎಸ್ ಎಸ್ ಶಿಬಿರದ ಮಹತ್ವ, ಉದ್ದೇಶ, ಶಿಬಿರದಲ್ಲಿ ಕಲಿತ ಶಿಕ್ಷಣ ಇಡೀ ನಮ್ಮ ಜೀವನವನ್ನು ಹೇಗೆ ಬದಲಿಸುತ್ತದೆ, ಪರೀಕ್ಷೆಯಲ್ಲಿ ಸೋತರು ಜೀವನದಲ್ಲಿ ಗೆಲ್ಲಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿ ಶುಭ ಹಾರೈಸಿದರು.

ಶ್ರೀ ರಮೇಶ್ ಕಾಮತ್ ಅಧ್ಯಕ್ಷರು ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಆಡಳಿತ ಮಂಡಳಿ ಮರ್ಣೆ ಇವರು ದೇಶದ ಅಭಿವೃದ್ಧಿ ಯುವ ಜನತೆಯನ್ನು ಅವಲಂಬಿಸಿದೆ ದೈಹಿಕ ಶ್ರಮದ ಮೂಲಕ ಗ್ರಾಮದ ಅಭಿವೃದ್ಧಿ ಮಾಡಬೇಕಾಗಿ ವಿದ್ಯಾರ್ಥಿಗಳಿಗೆ ಎಚ್ಚರಿಸಿದರು.

ಶ್ರೀ ಕೃಷ್ಣ ನಾಯ್ಕ್ ಮುಖ್ಯೋಪಾಧ್ಯಾಯರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಮರ್ಣೆ ಇವರು ವಿದ್ಯಾರ್ಥಿಗಳ ಉದ್ದೇಶಿಸಿ ಮಾತನಾಡಿ ಇದು ನಿಮ್ಮ ಮನೆ, ನಮ್ಮ ಮಕ್ಕಳಿಗೂ ನಮಗೂ ಹಿತವನ್ನು ನೀಡುತ್ತಿದೆ. ತಮ್ಮ ಶಾಲಾ ವಠಾರದ ಕುರಿತು ಮಾತನಾಡಿ ವಿದ್ಯಾರ್ಥಿಗಳಿಗೆ ಅದರ ಮಾಹಿತಿಯನ್ನು ನೀಡಿದರು.

ಶ್ರೀ ಪ್ರಭಾಕರ ಕೆ.ಎಸ್ ಪ್ರಭಾರ ಕಾರ್ಯದರ್ಶಿ ಜನರಲ್ ಇನ್ಸುರೆನ್ಸ್  ಎಂಪ್ಲಾಯಿಸ್ ಕ್ರೆಡಿಟ್ ಕಾರ್ಪೊರೇಟಿವ್ ಸೊಸೈಟಿ ಉಡುಪಿ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಒಗ್ಗಟ್ಟಿನಲ್ಲಿ ಬಲವಿದೆ ಎಂದು ಒಗ್ಗಟ್ಟಿನ ಮಹತ್ವ, ಭಾರತ ದೇಶದಲ್ಲಿ ಯುವಜನತೆಯ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಿದರು.

ಶ್ರೀ ಕರುಣಾಕರ ಕರ್ಕೇರ ಅಧ್ಯಕ್ಷರು ಹಾಲು ಉತ್ಪಾದಕರ ಸಹಕಾರ ಸಂಘ ಮರ್ಣೆ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನಮ್ಮ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀನಾ ಎಸ್ ನಾಯಕ್ ಇವರು ಸರ್ವರನ್ನೂ ಸ್ವಾಗತಿಸಿದರು.

ಕಾರ್ಯಕ್ರಮದ ಹಾಗೂ ಶಿಬಿರದ ಯೋಜನಾಧಿಕಾರಿಗಳಾದ ಶ್ರೀ ಭಾಸ್ಕರ್ ಆಚಾರ್ಯ ಇವರು ಕಾರ್ಯಕ್ರಮದ ಪ್ರಸ್ತಾವನೆ ನುಡಿ ನುಡಿದರು

ಶ್ರೀಮತಿ ಪ್ರತಿಮಾ ಅರ್ಥಶಾಸ್ತ್ರ ಉಪನ್ಯಾಸಕಿ ಇವರು ಸನ್ಮಾನಿತರ ಪರಿಚಯವನ್ನು ವಾಚಿಸಿದರು.

ಎನ್ ಎಸ್ ಎಸ್ ನಾಯಕಿ ತ್ರಿಷ ಹಾಗೂ ನಾಯಕ ಆರ್ಯನ್ ಶೆಟ್ಟಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರು ರಾಷ್ಟ್ರೀಯ ಸೇವಾ ಯೋಜನೆ ಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು. 

ವಾಣಿಜ್ಯ ಶಾಸ್ತ್ರ ಉಪನ್ಯಾಸಕಿಯಾದ ಶ್ರೀಮತಿ ದಿವ್ಯಾ ಇವರು ಸರ್ವರನ್ನು ವಂದಿಸಿದರು.

ಕನ್ನಡ ಹಾಗೂ ಹಿಂದಿ ಭಾಷಾ ಉಪನ್ಯಾಸಕರಾದ ಸುಶ್ಮಿತಾ ಹಾಗೂ ಪ್ರಮೀಳಾ ಇವರು ಕಾರ್ಯಕ್ರಮ ನಿರೂಪಿಸಿದರು