Home Latest ರಿಲಯನ್ಸ್ ಇಂಡಸ್ಟ್ರೀಸ್‌ನ ಬಿಜಲ್ ಮೇಸ್ವಾನಿ ಕುಟುಂಬ ಸಮೇತ ಶ್ರೀ ಕೃಷ್ಣ ಮಠಕ್ಕೆ ಭೇಟಿ..!

ರಿಲಯನ್ಸ್ ಇಂಡಸ್ಟ್ರೀಸ್‌ನ ಬಿಜಲ್ ಮೇಸ್ವಾನಿ ಕುಟುಂಬ ಸಮೇತ ಶ್ರೀ ಕೃಷ್ಣ ಮಠಕ್ಕೆ ಭೇಟಿ..!

ಉಡುಪಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಬಿಜಲ್ ಮೇಸ್ವಾನಿ ಹಾಗೂ ಅವರ ಕುಟುಂಬದವರು ಗುರುವಾರ (ಆ.27) ಶ್ರೀ ಕೃಷ್ಣ ಮಠ, ಪರ್ಯಾಯ ಶ್ರೀ ಶೀರೂರು ಮಠಕ್ಕೆ ಭೇಟಿ ನೀಡಿ ಶ್ರೀ ಕೃಷ್ಣನ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಂದ ಫಲ ಮಂತ್ರಾಕ್ಷತೆ ಸ್ವೀಕರಿಸಿದರು.

ಈ ವೇಳೆ ಮಠದ ದಿವಾನರಾದ ಉದಯ ಕುಮಾರ್ ಸರಳತ್ತಾಯ, ಪಾರುಪತ್ಯೆಗಾರರಾದ ಶ್ರೀಶ ಭಟ್ ಕಡೇಕಾರು ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಸ್ಥಳೀಯ ಅಧಿಕಾರಿಗಳಾದ ಧನಂಜಯ ಆರ್.ವಿಪಿನ್ ಸಪ್ರೆ, ಶಿವನಂದನ ಮತ್ತು ಮಾಧವ ಶಾನುಭಾಗ್ ಉಪಸ್ಥಿತರಿದ್ದರು.