ಉಡುಪಿ : ಲಯನ್ಸ್ ಇಂಟರ್‌ನ್ಯಾಷನಲ್‌ನ ಲಯನ್ಸ್ ಕ್ಲಬ್ ಬನ್ನಂಜೆ ಕ್ರೌನ್ ವತಿಯಿಂದ 2026-27ನೇ ಸಾಂಸ್ಥಿಕ ವರ್ಷದ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಹೊಸ ಸದಸ್ಯರ ಸೇರ್ಪಡೆ ಕಾರ್ಯಕ್ರಮವು ಉಡುಪಿ ಟೌನ್ ಹಾಲ್‌ನಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿಲ್ಲಾ 317ಸಿ ಪ್ರಥಮ ಉಪ ಜಿಲ್ಲಾ ಗವರ್ನರ್ ಹರಿಪ್ರಸಾದ್ ರೈ, ಜಿಲ್ಲಾ 317ಸಿ ಇದರ ಜಿಲ್ಲಾ ಗವರ್ನರ್ ಜಯಕರ ಶೆಟ್ಟಿ ಇಂದ್ರಾಳಿ ಭಾಗವಹಿಸಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಸುಮಾಲಿನಿ ದಯಾನಂದ, ಪ್ರಥಮ ಉಪಾಧ್ಯಕ್ಷರಾಗಿ ವಿದ್ಯಾಲತಾ ಯು. ಶೆಟ್ಟಿ, ಕಾರ್ಯದರ್ಶಿಯಾಗಿ ಅನುಪಮ ಜಯಕುಮಾರ್ ಹಾಗೂ ಖಜಾಂಚಿಯಾಗಿ ರಮಾದೇವಿ ಅಧಿಕಾರ ಸ್ವೀಕರಿಸಿದರು.
ಟೈಲ್ ಟ್ವಿಸ್ಟರ್ ಆಗಿ ಪ್ರೇಮಾ ಶೆಟ್ಟಿ, ಕ್ಲಬ್ ಸರ್ವಿಸ್ ಚೇರ್‌ಪರ್ಸನ್ ಆಗಿ ಆಶ್ವಥ್ ನಾಯಕ್, ಕ್ಲಬ್ ಮಾರ್ಕೆಟಿಂಗ್ ಚೇರ್‌ಪರ್ಸನ್ ರವೀಂದ್ರ ಕುಂದರ್ ಹಾಗೂ ಸದಸ್ಯತ್ವ ಸಮಿತಿ ಚೇರ್‌ಪರ್ಸನ್ ವಿದ್ಯಾ ಶೆಟ್ಟಿ, ಕಾರ್ಕಳ ಅವರು ಜವಾಬ್ದಾರಿ ವಹಿಸಿಕೊಂಡರು.
ನಿರ್ದೇಶಕರಾಗಿ ಮಾಯಾ ಶೆಟ್ಟಿ, ರಂಜಿತಾ ಶೆಟ್ಟಿ, ಶಕುಂತಲಾ ಶೆಟ್ಟಿ, ವಿಶಾಲಾ ಶೆಟ್ಟಿ ಹಾಗೂ ಅಶೋಕ್ ಶೆಟ್ಟಿ ಸೇರಿದಂತೆ ವಿವಿಧ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.
ಸಮಾರಂಭದಲ್ಲಿ ದೈವಾರಾಧನೆ, ಸಮಾಜ ಸೇವೆ, ಸಹಕಾರಿ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ವಿನೋದ್ ಶೆಟ್ಟಿ, ಮಮತಾ ಶೆಟ್ಟಿ ಹಾಗೂ ಪ್ರಶಾಂತ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಎರಡು ಟೈಲರಿಂಗ್ ಮಿಷನ್‌ಗಳನ್ನು ವಿತರಿಸುವುದರ ಜೊತೆಗೆ ಅಗತ್ಯವಿರುವವರಿಗೆ ಆರ್ಥಿಕ ನೆರವು ನೀಡಲಾಯಿತು. ಲಯನ್ಸ್ ಕ್ಲಬ್ ಬನ್ನಂಜೆ ಕ್ರೌನ್‌ನ ಸಮಾಜಮುಖಿ ಸೇವಾ ಚಟುವಟಿಕೆಗಳ ಭಾಗವಾಗಿ ಈ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಯಿತು.
2025-26ನೇ ಸಾಲಿನ ಮಾಜಿ ಅಧ್ಯಕ್ಷ ಲಯನ್ ಅಶೋಕ್ ಡಿ. ಶೆಟ್ಟಿ ಹಾಗೂ ಕಾರ್ಯದರ್ಶಿ ಲಯನ್ ಪ್ರೇಮಾ ಶೆಟ್ಟಿ ಸೇರಿದಂತೆ ಕ್ಲಬ್‌ನ ಸದಸ್ಯರು, ಗಣ್ಯರು ಹಾಗೂ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪೂಜಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.





