Home Dskshina Kannada ಲಾರಿ ಕ್ಲೀನರ್ ಕುಸಿದು ಬಿದ್ದು ಮೃತ್ಯು..!!

ಲಾರಿ ಕ್ಲೀನರ್ ಕುಸಿದು ಬಿದ್ದು ಮೃತ್ಯು..!!

ಕೊಲ್ಲೂರು: ಜಡ್ಕಲ್‌ ಗ್ರಾಮದ ಜಂಕ್ಷನ್ ಬಳಿ ಲಾರಿ ಕ್ಲೀನರ್ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ದಾವಣಗೆರೆ ಜಿಲ್ಲೆಯ ಗಣೇಶ್(45) ಎಂದು ಗುರುತಿಸಲಾಗಿದೆ.

ಇವರು ಕಳೆದ 4 ವರ್ಷಗಳಿಂದ ಶಿವಮೊಗ್ಗ ಜಿಲ್ಲೆಯ ಕುಂಶಿ ಗ್ರಾಮದ ಶಿವು ಕುಮಾರ ಎಂಬವರ ಲಾರಿಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡಿಕೊಂಡಿದ್ದರು.

ಮಂಗಳೂರಿನಿಂದ ಲಾರಿಯಲ್ಲಿ ಬರುತ್ತಿದ್ದಾಗ ದಾರಿ ಮಧ್ಯೆ ಮೂತ್ರ ವಿಸರ್ಜನೆಗಾಗಿ ಲಾರಿಯನ್ನು ರಸ್ತೆ ಬದಿ ನಿಲ್ಲಿಸಿದ್ದು, ಗಣೇಶ್ ಮೂತ್ರ ವಿಜರ್ಸನೆ ಮಾಡುತ್ತಿದ್ದಾಗ ಅಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.