ಉಡುಪಿ: ಫೇಸ್‌ಬುಕ್‌ನಲ್ಲಿ ಬಂದ ನಕಲಿ ಟ್ರೇಡಿಂಗ್ ಲಿಂಕ್ ನಂಬಿ ಹೂಡಿಕೆ ಮಾಡಿದ 75 ವರ್ಷದ ವೃದ್ಧರೊಬ್ಬರು 14.35 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ದೂರುದಾರ ರಮೇಶ ಶೆಟ್ಟಿ (75) ಅವರ ಫೇಸ್‌ಬುಕ್‌ಗೆ ಜುಲೈ 29ರಂದು HDFC Security ಹೆಸರಿನಲ್ಲಿ ಒಂದು ಲಿಂಕ್ ಬಂದಿದೆ. ಅದರಲ್ಲಿ High Network Investor Used ID ನೀಡಿ ಟ್ರೇಡಿಂಗ್ ಮಾಡಲು ತಿಳಿಸಿದ್ದಾರೆ.
ಮೊದಲಿಗೆ 40,000 ರೂ. ಹೂಡಿಕೆ ಮಾಡಿದಾಗ 5% ಲಾಭ ಬಂದಿದೆ ಎಂದು ತೋರಿಸಿದ್ದಾರೆ. ಇದನ್ನು ನಂಬಿದ ಅವರು ಆಗಸ್ಟ್ 18ರಂದು 80,000 ರೂ., 50,000 ರೂ. ಮತ್ತು 1,25,000 ರೂ. ಹೀಗೆ ಹಂತ ಹಂತವಾಗಿ ಹಣ ಹಾಕಿದ್ದಾರೆ.
ಮಧ್ಯದಲ್ಲಿ ಸೆಪ್ಟೆಂಬರ್ 1ರಂದು ನಿಮಗೆ ESDS Software Solution Ltd IPOದಲ್ಲಿ 3,400 ಶೇರ್‌ಗಳು 272 ರೂ. ದರದಲ್ಲಿ ಮಂಜೂರಾಗಿದೆ, ಅದರ ಒಟ್ಟು ಮೌಲ್ಯ 9,24,800 ರೂ. ಎಂದು ಮೆಸೇಜ್ ಕಳಿಸಿದ್ದಾರೆ. ತಾವು IPOಗೆ ಅರ್ಜಿಯನ್ನೇ ಹಾಕಿಲ್ಲ ಎಂದು ಹೇಳಿ ಕ್ಯಾನ್ಸಲ್ ಮಾಡಲು ಕೇಳಿದರೂ ವಂಚಕರು ಒಪ್ಪದೆ ಬಲವಂತವಾಗಿ ಹಣ ಕಟ್ಟಿಸಿಕೊಂಡಿದ್ದಾರೆ. ಸಾಲ ಮಾಡಿ ರಮೇಶ್ ಅವರು 9,24,800 ರೂ. ಕಟ್ಟಿದ್ದಾರೆ.
ಹಣ ವಾಪಸ್ ತೆಗೆಯಲು ಹೋದಾಗ, ಲಾಭಾಂಶದ 10% ಅಂದರೆ 5,10,724 ರೂ. ಕೊಟ್ಟರೆ ಮಾತ್ರ ಹಣ ವಾಪಸ್ ಕೊಡುತ್ತೇವೆ ಎಂದು ಹೇಳಿದ್ದಾರೆ. ಅದನ್ನೂ ನಂಬಿ ಅವರು ಮತ್ತೆ 5,10,724 ರೂ. ಕಟ್ಟಿದ್ದಾರೆ.
ಹಣ ಕಟ್ಟಿದ ಬಳಿಕ ವಾಟ್ಸಾಪ್, ಫೋನ್ ಕರೆಗಳನ್ನು ಬ್ಲಾಕ್ ಮಾಡಿದ್ದಾರೆ.
ಒಟ್ಟು 14,35,724 ರೂ. ವಂಚನೆಯಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 137/2026, ಕಲಂ 66 IT Act ಮತ್ತು 318(4) BNS ರಂತೆ ಪ್ರಕರಣ ದಾಖಲಾಗಿದೆ.



