Home Crime ಗೇರು ಮರದ ಕೊಂಬೆಗೆ ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ…!!

ಗೇರು ಮರದ ಕೊಂಬೆಗೆ ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ…!!

ಶಂಕರನಾರಾಯಣ: ಉಡುಪಿ ಜಿಲ್ಲೆಯ ಶಂಕರನಾರಾಯಣ ಸಮೀಪ ವ್ಯಕ್ತಿಯೊಬ್ಬರು ಮನೆಯ ಹಿಂಬದಿ ಗೇರು ಮರದ ಕೊಂಬೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಆತ್ಮಹತ್ಯೆಗೆ ಶರಣಾದ ವ್ಯಕ್ತಿ ನಾಗು‌ ಪೂಜಾರಿ ಎಂದು ತಿಳಿದು ಬಂದಿದೆ.

ಪ್ರಕರಣದ ವಿವರ:  ಪಿರ್ಯಾಧಿದಾರ ಶ್ರೀನಿವಾಸ(30) ತಂದೆ; ನಾಗು ಪೂಜಾರಿ ವಾಸ: ಮನೆ ನಂಬ್ರ 2-129-3, ನೀರ್‌ ಜೆಡ್ಡು, ಹಳ್ಳಿಹೊಳೆ ಗ್ರಾಮ ಇವರ ತಂದೆ ನಾಗು ಪೂಜಾರಿ (52) ರವರು ಕಳೆದ 30 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಅದಕ್ಕೆ ಪಿರ್ಯಾದಿದಾರರು ಕುಂದಾಪುರದ ಸತ್ಯಮಾನಸ ಮನೋ ವೈದ್ಯಕೀಯ ಸಲಹಾ ಕೇಂದ್ರದಲ್ಲಿ ಚಿಕಿತ್ಸೆಯನ್ನು ಕೊಡಿಸುತ್ತಿದ್ದು ಆದರೂ ಕೂಡಾ ಕಳೆದ ಒಂದು ವಾರದಿಂದ ನಾಗ ಪೂಜಾರಿರವರು ಮಂಕಾಗಿದ್ದರು. ಅಲ್ಲದೇ ಕಳೆದ 1 ತಿಂಗಳ ಹಿಂದೆ ನಾಗು ಪೂಜಾರಿ ರವರು ಅವರ ಮನೆಗೆ ಹೋಗಿದ್ದಾಗ ಬಿದ್ದು ಅವರ ಬಲಕಾಲಿನ ಮದ್ಯದ ಗಂಟಿನಿಂದ ಮೇಲಕ್ಕೆ ಪೆಟ್ಟು ಮಾಡಿಕೊಂಡಿದ್ದು, ನಿನ್ನೆ ದಿನಾಂಕ: 18.01.2026 ರಂದು ಸಂಜೆ ಪಿರ್ಯಾಧಿದಾರರು ಕೆಲಸದಲ್ಲಿರುವಾಗ ಪಿರ್ಯಾಧಿದಾರರ ಮಾವ ಕೃಷ್ಣರವರು ಪೋನ್ ಮಾಡಿ ನಾಗು ಪೂಜಾರಿ ರವರು ಮನೆಯ ಹಿಂಬದಿ ಗೇರು ಮರದ ಕೊಂಬೆಗೆ ನೇಣು ಬಿಗಿದುಕೊಂಡಿರುವ ವಿಚಾರವನ್ನು ತಿಳಿಸಿರುವುದಾಗಿದೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯು ಡಿ ಆರ್‌ ಕ್ರಮಾಂಕ: 02/2026 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.