Home Crime ಲಾಡ್ಜ್ ಸಮೀಪ ಆರ್‌ಎಫ್‌ಒ ಕಾಂತರಾಜ್ ಮೃತದೇಹ ಪತ್ತೆ…!!

ಲಾಡ್ಜ್ ಸಮೀಪ ಆರ್‌ಎಫ್‌ಒ ಕಾಂತರಾಜ್ ಮೃತದೇಹ ಪತ್ತೆ…!!

ಮೈಸೂರು : ಮೈಸೂರು ಜಿಲ್ಲೆ ಟಿ.ನರಸೀಪುರ ಸಾಮಾಜಿಕ ಅರಣ್ಯ ವಲಯದ ರೇಂಜ್ ಫಾರೆಸ್ಟ್ ಅಧಿಕಾರಿ ವಿಜಯಪುರ ಮೂಲದ ಕಾಂತರಾಜ್ ಚೌಹಾಣ್ (35) ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ.

ಆರ್‌ಎಫ್‌ಒ ಕಾಂತರಾಜ್ ಔಹಾಣ್ ಅವರು ಮೈಸೂರಿನ ಸಬ್ ಅರ್ಬನ್ ಬಸ್ ನಿಲ್ದಾಣದ ಬಳಿಯ ಲಾಡ್ಜ್ ನಲ್ಲಿ ವಾಸ್ತವ್ಯ ಹೂಡಿದ್ದರು. ಸ್ನೇಹಿತ ಮನು ಎಂಬವರ ಜೊತೆ ಪಾರ್ಟಿ ಮುಗಿಸಿ ಲಾಡ್ಜ್ ಗೆ ವಾಪಸ್ ಆಗಿದ್ದರು. ಬಳಿಕ ವಾಕಿಂಗ್ ಮಾಡಿ ಲಾಡ್ಜ್ ಗೆ ಬಂದು ನಿದ್ರೆ ಗೆ ಹೋಗಿದ್ದರು. ಆದರೆ ಸೋಮವಾರ ಬೆಳಿಗ್ಗೆ ಎದ್ದು ಮನು ನೋಡಿದಾಗ ಕಾಂತರಾಜ್ ಕಾಣಿಸಲಿಲ್ಲ. ನಂತರ ಮನು ಸುತ್ತಾ ಮುತ್ತಾ ಹುಡುಕಾಡಿದಾಗ ಲಾಡ್ಜ್ ಬಳಿಯ ಸಮೀಪದಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಮಾಹಿತಿ ಪಡೆದ ಲಷ್ಕರ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಲೋಲಾಕ್ಷಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ, ಬಳಿಕ ಮೃತದೇಹವನ್ನು ಎಂಎಂಸಿ ಮತ್ತು ಆರ್‌ಐ ಮರಣೋತ್ತರ ಪರೀಕ್ಷಾ ಗೃಹಕ್ಕೆ ರವಾನಿಸಿದರು.

ದೇವರಾಜಠಾಣೆ ಎಸಿಪಿ ಕೆ. ರಾಜೇಂದ್ರ ಕೂಡ ಸ್ಥಳಕ್ಕೆ ಭೇಟಿ ನೀಡಿದರು. ಲಷ್ಕರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.