Home Kundapura News ಕೋಟ: ಕಾರು ಡಿಕ್ಕಿ : ಪಾದಚಾರಿ ಮೃತ್ಯು…!

ಕೋಟ: ಕಾರು ಡಿಕ್ಕಿ : ಪಾದಚಾರಿ ಮೃತ್ಯು…!

ಕೋಟ: ಕಾರು ಡಿಕ್ಕಿ ಹೊಡೆದು ಪಾದಚಾರಿಯೋರ್ವ ಸಾವನ್ನಪ್ಪಿದ ಘಟನೆ ಆ. 24 ರಂದು ಸೋಮವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 66ರ ಕೋಟ ಗೊಬ್ಬರಬೆಟ್ಟುವಿನ ಬೊಬ್ಬರ್ಯ ಕಟ್ಟೆ ಸಮೀಪ ಸಂಭವಿಸಿದೆ.

ಮೃತಪಟ್ಟ ಪಾದಚಾರಿ ಗಿಳಿಯಾರು ಮಂಜು ಪೂಜಾರಿ (67) ಎಂದು ಗುರುತಿಸಲಾಗಿದೆ. ಮಂಜು ಅವರು ಕೋಟದಿಂದ ಗಿಳಿಯಾರಿಗೆ ಹೋಗಲು ಹೆದ್ದಾರಿ ದಾಟಲೆಂದು ರಸ್ತೆ ಬದಿಯಲ್ಲಿ ನಿಂತಿದ್ದ ವೇಳೆ ಉಡುಪಿಯಿಂದ ಕುಂದಾಪುರ ಕಡೆ ಹೋಗುತ್ತಿದ್ದ ಕಾರೊಂದು ಚಾಲಕ ಅತೀ ವೇಗ ಹಾಗೂ ಅಜಾಗರೂಕತೆ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ಮಂಜು ಪೂಜಾರಿ ಅವರಿಗೆ ನೇರ ಡಿಕ್ಕಿ ಹೊಡೆದಿರುತ್ತಾರೆ.

ಡಿಕ್ಕಿಯ ರಭಸಕ್ಕೆ ಮಂಜು ಪೂಜಾರಿ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಹಾಗೂ ಕಾಲಿಗೆ ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಜೀವನ್ ಮಿತ್ರ ನಾಗರಾಜ್ ಪುತ್ರನ್ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಟೋಲ್ ಆಂಬುಲೆನ್ಸ್ ನಲ್ಲಿ ಬ್ರಹ್ಮಾವರ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲಿ ಗಾಯಾಳುವನ್ನು ಪರೀಕ್ಷಿಸಿದ ವೈಧ್ಯರು ಮಂಜು ಪೂಜಾರಿ ಇವರು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ