Home Dskshina Kannada ಉಳ್ಳಾಲ ಕಡಲ ತೀರಕ್ಕೆ ಬಂದ ರಾಶಿ ರಾಶಿ ಬೂತಾಯಿ ಮೀನುಗಳು…!!

ಉಳ್ಳಾಲ ಕಡಲ ತೀರಕ್ಕೆ ಬಂದ ರಾಶಿ ರಾಶಿ ಬೂತಾಯಿ ಮೀನುಗಳು…!!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಸಮುದ್ರ ತೀರದಲ್ಲಿ ಅಪರೂಪದ ದೃಶ್ಯವೊಂದು ಕಂಡುಬಂದಿದ್ದು, ರಾಶಿ ರಾಶಿಯಾಗಿ ಬೂತಾಯಿ ಮೀನುಗಳು ದಡಕ್ಕೆ ಅಪ್ಪಳಿಸಿವೆ. ಈ ದೃಶ್ಯವನ್ನು ಕಂಡ ಸ್ಥಳೀಯರು ಹಾಗೂ ಪ್ರವಾಸಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಬೆಳಗ್ಗೆ ಸಮುದ್ರ ತೀರಕ್ಕೆ ಏಕಾಏಕಿ ಅಪಾರ ಪ್ರಮಾಣದಲ್ಲಿ ಬೂತಾಯಿ ಮೀನುಗಳು ಬಂದಿದ್ದು, ಸ್ಥಳೀಯರು ಪ್ಲಾಸ್ಟಿಕ್ ಚೀಲ, ಗೋಣಿ ಚೀಲ ಹಾಗೂ ಬುಟ್ಟಿಗಳಲ್ಲಿ ಮೀನುಗಳನ್ನು ಸಂಗ್ರಹಿಸಿಕೊಂಡರು. ಕೆಲವರು ಈ ಮೀನುಗಳನ್ನು ಮಾರಾಟ ಮಾಡಿ ಆದಾಯವನ್ನೂ ಗಳಿಸಿದರು ಎಂದು ತಿಳಿದುಬಂದಿದೆ.

ಮಳೆಗಾಲದಲ್ಲಿ ಸಮುದ್ರದ ಅಲೆಗಳ ಪ್ರಭಾವ ಅಥವಾ ದೋಣಿಗಳ ಸಂಚಾರದಿಂದ ಉಂಟಾಗುವ ಶಬ್ದದ ಪರಿಣಾಮ ಮೀನುಗಳ ಹಿಂಡು ದಡಕ್ಕೆ ಅಪ್ಪಳಿಸಿರಬಹುದು ಎಂದು ಸ್ಥಳೀಯ ಮೀನುಗಾರರು ಅಭಿಪ್ರಾಯಪಟ್ಟಿದ್ದಾರೆ. ಈ ದೃಶ್ಯವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಮುದ್ರ ತೀರದತ್ತ ಆಗಮಿಸಿದರು.