Home Crime ಮಂಗಳೂರು: ರೈಲ್ವೆ ಸ್ಟೇಷನ್ ಬಳಿ ಡ್ರಗ್ಸ್ ಸೇವನೆ – ಓರ್ವ ವಶಕ್ಕೆ…!!

ಮಂಗಳೂರು: ರೈಲ್ವೆ ಸ್ಟೇಷನ್ ಬಳಿ ಡ್ರಗ್ಸ್ ಸೇವನೆ – ಓರ್ವ ವಶಕ್ಕೆ…!!

ಮಂಗಳೂರು: ನಗರದ ಸೆಂಟ್ರಲ್ ರೈಲ್ವೆ ಸ್ಟೇಷನ್ ಬಳಿ ಮಾದಕ ವಸ್ತು ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ವ್ಯಕ್ತಿಯನ್ನು ದಕ್ಷಿಣ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಂಗಳೂರು ದಕ್ಷಿಣ ಠಾಣೆಯ ಪಿಸಿ ಸ್ವಾಮಿ ಮತ್ತು ಪಿಸಿ ವಿನಾಯಕ್ ಅವರು ಅಕ್ಟೋಬರ್ 8ರಂದು ರಾತ್ರಿ 2 ಗಂಟೆಗೆ ಗಸ್ತಿನಲ್ಲಿದ್ದಾಗ, ರೈಲ್ವೆ ಸ್ಟೇಷನ್ ಬಳಿ ವ್ಯಕ್ತಿಯೊಬ್ಬ ಮಾದಕ ಸೇವಿಸಿರುವ ಬಗ್ಗೆ ಖಚಿತ ಮಾಹಿತಿ ಬಂದಿದೆ. ರಾತ್ರಿ 2:15ಕ್ಕೆ ಸ್ಥಳಕ್ಕೆ ತೆರಳಿ ರಾತ್ರಿ 2:20ಕ್ಕೆ ಆತನನ್ನು ವಶಕ್ಕೆ ಪಡೆಯಲಾಗಿದೆ.

ವಶಕ್ಕೆ ಪಡೆದ ವ್ಯಕ್ತಿಯನ್ನು ನಿಜಾಮುದ್ದೀನ್ (30), ತಂದೆ ಹಾರಿಸ್, ವಾಸ ಎಂಜೆಎಂ 974, ಕಸಬ ಬೆಂಗ್ರೆ, ಕೂಳೂರು, ಮಂಗಳೂರು ಎಂದು ಗುರುತಿಸಲಾಗಿದೆ.

ವಿಚಾರಣೆ ವೇಳೆ ಆತನ ಮಾತು ತೊದಲುತ್ತಿದ್ದು, ಬಾಯಿಯಿಂದ ಅಮಲು ಪದಾರ್ಥದ ವಾಸನೆ ಬರುತ್ತಿತ್ತು. ಮಾದಕ ಸೇವನೆ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.

ಆತನನ್ನು ಎ.ಜೆ. ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಿದಾಗ Amphetamine, Methamphetamine ಮತ್ತು Tetrahydrocannabinoid ಸೇವಿಸಿರುವುದು ದೃಢಪಟ್ಟಿದೆ.

ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.