Home Crime ಬಂಟ್ವಾಳ: MDMA ಮಾರಾಟಕ್ಕೆ ಯತ್ನ – ಓರ್ವ ಅರೆಸ್ಟ್…!!

ಬಂಟ್ವಾಳ: MDMA ಮಾರಾಟಕ್ಕೆ ಯತ್ನ – ಓರ್ವ ಅರೆಸ್ಟ್…!!

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಟೋಲ್‌ಗೇಟ್ ಬಳಿ ಮಾದಕ ವಸ್ತು ಮಾರಾಟಕ್ಕೆ ನಿಂತಿದ್ದ ವ್ಯಕ್ತಿಯನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ನಗರ ಠಾಣೆಯ ಪಿಎಸ್ಐ ಸಂದೀಪ್ ಕುಮಾರ್ ಶೆಟ್ಟಿ ಅವರಿಗೆ ಅಕ್ಟೋಬರ್ 8ರಂದು ಸಂಜೆ 3:55ಕ್ಕೆ ಕಳ್ಳಿಗೆ ಗ್ರಾಮದ ಟೋಲ್‌ಗೇಟ್ ಬಳಿ ಸರ್ವಿಸ್ ರಸ್ತೆಯಲ್ಲಿ ಆಕ್ಟಿವಾ ಗಾಡಿಯಲ್ಲಿ ನಿಂತು ಡ್ರಗ್ಸ್ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಕೂಡಲೇ ಪೊಲೀಸ್ ತಂಡ ಖಾಸಗಿ ವಾಹನದಲ್ಲಿ ಬಿಸಿ ರೋಡ್, ಕೈಕಂಬ, ತಲಪಾಡಿ ಮೂಲಕ ಬ್ರಹ್ಮರಕೂಟ್ಲು ಬ್ರಹ್ಮರ ಸನ್ನಿಧಿ ದೈವಸ್ಥಾನದ ಬಳಿ ಹೋಗಿದೆ.

ಅಲ್ಲಿ http://KA.19.HP.7644 ನಂಬರದ ಕಪ್ಪು ಆಕ್ಟಿವಾ ಬಳಿ ನಿಂತಿದ್ದ ವ್ಯಕ್ತಿ ಪೊಲೀಸರನ್ನು ಕಂಡು ಓಡಲು ಯತ್ನಿಸಿದ್ದಾನೆ. ಆತನನ್ನು ಹಿಡಿದು ವಿಚಾರಿಸಿದಾಗ ತನ್ನ ಹೆಸರು ಅಶ್ರಫ್ ಯಾನೆ ಮೊಹಮ್ಮದ್ ಅಶ್ರಫ್ (48), ಪುದು ಗ್ರಾಮ, ಬಂಟ್ವಾಳ ಎಂದು ಹೇಳಿದ್ದಾನೆ.

60.87 ಗ್ರಾಂ MDMA ವಶಕ್ಕೆ…

ಆತನ ಪ್ಯಾಂಟ್ ಜೇಬಿನಲ್ಲಿ 4 ಪ್ಯಾಕೆಟ್ ಮತ್ತು ಆಕ್ಟಿವಾ ಸೀಟಿನಡಿ ಪಿಂಕ್ ಕವರ್‌ನಲ್ಲಿ 5 ಪ್ಯಾಕೆಟ್ ಸೇರಿ ಒಟ್ಟು 9 ಪ್ಯಾಕೆಟ್‌ಗಳಲ್ಲಿ ಬಿಳಿ ಬಣ್ಣದ ಸಕ್ಕರೆಯಂತಹ ಪದಾರ್ಥ ಇತ್ತು. SOCO ಅಧಿಕಾರಿಗಳು ಪ್ರಾಥಮಿಕ ಪರೀಕ್ಷೆ ನಡೆಸಿದಾಗ ಅದು Suspected Amphetamine / Methamphetamine (MDMA) ಎಂದು ದೃಢಪಟ್ಟಿದೆ.

ಒಟ್ಟು 60.87 ಗ್ರಾಂ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದ್ದು, ಇದರ ಅಂದಾಜು ಮೌಲ್ಯ 1,21,740 ರೂ.

ಆತನ ಬಳಿ ಇದ್ದ 2 ಮೊಬೈಲ್, SBI ಡೆಬಿಟ್ ಕಾರ್ಡ್, 1,870 ರೂ. ನಗದು, ತೂಕದ ಮೆಷಿನ್, 8 ಖಾಲಿ ಪ್ಯಾಕೆಟ್ ಮತ್ತು ಕೃತ್ಯಕ್ಕೆ ಬಳಸಿದ ಆಕ್ಟಿವಾ ಗಾಡಿ (60,000 ರೂ.) ಸಹ ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡ ಒಟ್ಟು ಮೌಲ್ಯ 1,93,610 ರೂ.

ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ. 140/2026, NDPS Act ಕಲಂ 8(C), 22(C) ಅಡಿ ಪ್ರಕರಣ ದಾಖಲಾಗಿದೆ.