ದೆಹಲಿ : 20 ದಿನಗಳಿಂದ ಪಾಕಿಸ್ತಾನ ರೇಂಜರ್ಸ್‌ನ ವಶದಲ್ಲಿದ್ದ ಬಿಎಸ್‌ಎಫ್ ಯೋಧ ಪೂರ್ಣಂ ಕುಮಾರ್ ಶಾ ಅವರನ್ನು ಇಂದು ಬೆಳಗ್ಗೆ 10.30ಕ್ಕೆ ಅಮೃತಸರದಲ್ಲಿರುವ ಜಂಟಿ ಚೆಕ್‌ಪೋಸ್ಟ್ ಅಟ್ಟಾರಿಯಲ್ಲಿ ಭಾರತಕ್ಕೆ ಹಸ್ತಾಂತರಿಸಲಾಗಿದೆ.
ಈ ಹಸ್ತಾಂತರ ಶಾಂತಿಯುತವಾಗಿ ಮತ್ತು ನಿಗದಿತ ನಿಯಮಗಳ ಪ್ರಕಾರ ನಡೆದಿದೆ.
ಪಂಜಾಬ್‌ನ ಫಿರೋಜ್‌ಪುರ ಬಳಿಯ ಅಂತರಾಷ್ಟ್ರೀಯ ಗಡಿಯನ್ನು ಆಕಸ್ಮಿಕವಾಗಿ ದಾಟಿದ ಶಾ ಅವರನ್ನು ಪಾಕಿಸ್ತಾನ ರೇಂಜರ್‌ಗಳು ಬಂಧಿಸಿದ್ದರು. 2025ರ ಏಪ್ರಿಲ್ 23ರಂದು ಗಡಿ ಬೇಲಿಯ ಬಳಿ ಸರ್ವೀಶ್ ರೈಫಲ್‌ನೊಂದಿಗೆ ಕರ್ತವ್ಯದಲ್ಲಿದ್ದ ಶಾ ವಿಶ್ರಾಂತಿ ಪಡೆಯಲು ನೆರಳಿನ ಪ್ರದೇಶದ ಕಡೆಗೆ ತೆರಳಿದ ವೇಳೆ ಆಕಸ್ಮಿಕವಾಗಿ ಗಡಿ ದಾಟಿದ್ದರು ಎಂದು ವರದಿಯಾಗಿದೆ.