Home Crime ಕಾರೊಂದು ಸೈಕಲಿಗೆ ಹಿಂದಿನಿಂದ ಢಿಕ್ಕಿ : ಸವಾರ ಸಾವು…!!

ಕಾರೊಂದು ಸೈಕಲಿಗೆ ಹಿಂದಿನಿಂದ ಢಿಕ್ಕಿ : ಸವಾರ ಸಾವು…!!

ಕೋಟ: ಉಡುಪಿ ಜಿಲ್ಲೆಯ ಕೋಟ ಸಮೀಪ ಕಾರೊಂದು ಸೈಕಲಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಮೃತಪಟ್ಟ ಘಟನೆ ಬ್ರಹ್ಮಾವರ ತಾಲ್ಲೂಕಿನ ಮಾಬುಕಳ ಬಳಿ‌ ಸಂಭವಿಸಿದೆ.

ಸಾವನ್ನಪ್ಪಿದ ಸೈಕಲ್ ಸವಾರ ಹರಿಶ್ಚಂದ್ರ (49) ಎಂದು ಗುರುತಿಸಲಾಗಿದೆ.

ಪರಿಚಯದವರ ಗೃಹಪ್ರವೇಶ ಕಾರ್ಯಕ್ರಮ ಮುಗಿಸಿಕೊಂಡು ಮಾಬುಕಳ ಜಂಕ್ಷನ್ ಬಳಿ ಸೈಕಲ್ ನಲ್ಲಿ ಬರುತ್ತಿದ್ದಾಗ ಅತೀ ವೇಗ ಹಾಗೂ ಅಜಾಗರೂಕತೆ ಚಲಾಯಿಸಿಕೊಂಡು ಬಂದ ಕಾರೊಂದು ಸೈಕಲ್ಲಿಗೆ ಹಿಂದಿನಿಂದ ಢಿಕ್ಕಿ ಹೊಡೆದಿದೆ. ಆಗ ಸೈಕಲ್ ಸವಾರ ಹರಿಶ್ಚಂದ್ರ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಮಣಿಪಾಲದ ಕೆ ಎಂ ಸಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.