Home Karavali Karnataka ಬೈಂದೂರು : ಶ್ರೀ ವನದುರ್ಗಾದೇವಿ ದೇವಸ್ಥಾನ ಬನಗಲ್‌ ಹಾಡಿ, ನಾಯ್ಕನಕಟ್ಟೆ ಶರನ್ನವರಾತ್ರಿ ಮಹೋತ್ಸವದ ಸಂಭ್ರಮ…!!

ಬೈಂದೂರು : ಶ್ರೀ ವನದುರ್ಗಾದೇವಿ ದೇವಸ್ಥಾನ ಬನಗಲ್‌ ಹಾಡಿ, ನಾಯ್ಕನಕಟ್ಟೆ ಶರನ್ನವರಾತ್ರಿ ಮಹೋತ್ಸವದ ಸಂಭ್ರಮ…!!

ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಪ್ರಸಿದ್ಧ ವನದುರ್ಗಾದೇವಿ ದೇವಸ್ಥಾನ ಬನಗಲ್‌ ಹಾಡಿ, ನಾಯ್ಕನಕಟ್ಟೆ ಶರನ್ನವರಾತ್ರಿ ಮಹೋತ್ಸವ ಕಾರ್ಯಕ್ರಮ ಸೆಪ್ಟೆಂಬರ್ 22 ರಿಂದ ಆರಂಭಗೊಂಡು ಅಕ್ಟೋಬರ್ 02ರ ತನಕ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.

ಗ್ರಾಮ ದೇವತೆಯಾದ ವನದುರ್ಗಾದೇವಿದೇವಸ್ಥಾನದಲ್ಲಿ
ನವರಾತ್ರಿ ಉತ್ಸವದ ಅಂಗವಾಗಿ ಪ್ರತಿ ದಿನ ಬೆಳಿಗ್ಗೆ ದೇವಸ್ಥಾನದಲ್ಲಿ ಭಕ್ತರು ಸೇವಾ ರೂಪದಲ್ಲಿ ಶ್ರೀ ದೇವಿಗೆ ಸಮರ್ಪಿಸಲಿರುವ ಚಂಡಿಕಾ ಹೋಮ ದುರ್ಗಾ ಹೋಮ ಮತ್ತು ಅನ್ನಸಂತರ್ಪಣೆ ಸೇವಾ ಕಾರ್ಯ ಭಜನಾ ಸಂಕೀರ್ತನೆ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿ ವಿಧಾನಗಳು ಪ್ರಧಾನ ಅರ್ಚಕರರಾದ ಕೊರ್ಗಿ ಶ್ರೀ ನಾಗೇಶ್ವರ ಮಂಜರು ಮತ್ತು ಶ್ರೀ ರಾಘವೇಂದ್ರ ಕಾರಂತರ ನೇತೃತ್ವದಲ್ಲಿ ಜರುಗಲಿದೆ.

ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಸತೀಶ್ ಎನ್ ಕೊಠಾರಿ ಮಾತನಾಡಿ, ನವರಾತ್ರಿ ಸಂದರ್ಭದಲ್ಲಿ ತಾಯಿಯನ್ನು ಆರಾಧನೆ ಮಾಡುವುದರಿಂದ ತಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಬಹುದು.ತಾಯಿ ಆರಾಧನೆ ಮಾಡುವುದು ಜಗತ್ತಿನಲ್ಲಿ ಬಹಳ ಮುಖ್ಯವಾಗಿದೆ‌.ತಾಯಿ ಆರಾಧನೆ ಮಾಡುವುದರಿಂದ ಮೋಹ ಪಾಷದಿಂದ ಬಿಡುಗಡೆಯನ್ನು ಸಹ ಹೊಂದಬಹುದಾಗಿದೆ ಎಂದು ಹೇಳಿದರು.ಜಗನ್ಮಾತೆ ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಶುಭಹಾರೈಸಿದರು.

ಈ ಸಂದರ್ಭದಲ್ಲಿ ಧರ್ಮದರ್ಶಿ ಆಡಳಿತ ಮೊಕ್ತೆಸರರು ಶ್ರೀ ಭರತ್ ಎಸ್. ಪೂಜಾರಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಸತೀಶ್ ಎನ್. ಕೊಠಾರಿ, ನಾಯ್ಕನಕಟ್ಟೆ, ಉಪಾಧ್ಯಕ್ಷರು ಹೆರಿಯ ಪೂಜಾರಿ ಗಡಿನೇರುಮನೆ,ಕಾರ್ಯದರ್ಶಿ ಸುನೀಲ್ ಪೂಜಾರಿ ಸಾಯಿಕೃಪಾ, ನಾಯ್ಕನಕಟ್ಟೆ,ಖಜಾಂಚಿ ಎಂ ಗೋವಿಂದ ಮಟ್ಟಕಟ್ಟೆ,ನವರಾತ್ರಿ ಪೂಜಾ ಮಹೋತ್ಸವದ ಸಮಿತಿಯ ಸಮಿತಿಯ ಅಧ್ಯಕ್ಷರಾದ ನಾಗರಾಜ್ ಪೂಜಾರಿ ಕಾಮನಮನೆ ಸರ್ವ ಸದಸ್ಯರು ಗೌರವ ಸಲಹೆಗಾರರು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.