Home Crime ಬ್ರಹ್ಮಾವರ : ವ್ಯಕ್ತಿಯೋರ್ವರಿಗೆ ಶೇರು ಮಾರುಕಟ್ಟೆ ಹೂಡಿಕೆ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ…!!

ಬ್ರಹ್ಮಾವರ : ವ್ಯಕ್ತಿಯೋರ್ವರಿಗೆ ಶೇರು ಮಾರುಕಟ್ಟೆ ಹೂಡಿಕೆ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ…!!

ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ವ್ಯಕ್ತಿಯೋರ್ವರಿಗೆ ಸೈಬರ್ ಅಪರಾಧಿಯೊಬ್ಬ ಶೇರು ಮಾರುಕಟ್ಟೆ ಹೂಡಿಕೆ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಘಟನೆ ನಡೆದಿದೆ.

ಮಟಪಾಡಿ ನಿವಾಸಿಯೊಬ್ಬರು ಸೈಬರ್ ವಂಚನೆಯಾಗಿದೆ ಎಂದು ಬ್ರಹ್ಮಾವರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಕಾರ್ಯ ಕೈಗೊಂಡಿದ್ದಾರೆ.

ಪ್ರಕರಣದ ಸಾರಾಂಶ : ಬ್ರಹ್ಮಾವರ ಪೊಲೀಸ್ ಠಾಣಾ ಸರಹದ್ದಿನ ಚಾಂತಾರು ಗ್ರಾಮದ ಚೇತನ್ ನಗರ ಎಂಬಲ್ಲಿ ವಾಸವಾಗಿರುವ ಫಿರ್ಯಾದಿದಾರರು ದಿನಾಂಕ 29..02.2025 ರಂದು ಅವರ ಫೇಸ್ ಬುಕ್ ಖಾತೆಗೆ ಯಾರೋ ಸೈಬರ್ ಅಪರಾಧಿಯು ಕಳುಹಿಸಿದ Investec Securities India Private Limited ಎಂಬ ಕಂಪೆನಿಯ ಹೆಸರಿನಲ್ಲಿ ಬಂದ ಜಾಹಿರಾತು ನೋಡಿ, ಅದನ್ನು ನಂಬಿ ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವ ಬಗ್ಗೆ ಆಸಕ್ತಿಗೊಂಡು ಅವರು ನೀಡಿದ್ದ ನಂಬರಿಗೆ ವಾಟ್ಸ್ ಅಪ್ ಮೂಲಕ ಸಂಪರ್ಕಿಸಿ ದಿನಾಂಕ 29..02.2025 ರಿಂದ 12.12.2025ರ ಮಧ್ಯಾವಧಿಯಲ್ಲಿ ಫಿರ್ಯಾದಿದಾರರ Union Bank of India SB A/C No ನಿಂದ ಹಂತ ಹಂತವಾಗಿ ಒಟ್ಟು ರೂ. 4,71,000/-ಹಣವನ್ನು ಆರೋಪಿತರು ತಿಳಿಸಿದ ಖಾತೆಗಳಿಗೆ UPI ಹಾಗೂ Mobile Banking ಮೂಲಕ ಹಣವನ್ನು ವರ್ಗಾವಣೆಯನ್ನು ಮಾಡಿ ಮೋಸ ಹೋಗಿರುತ್ತಾರೆ.

ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ:13/2026 ಕಲಂ:66(C),66(D)IT ACT ರಂತೆ ಪ್ರಕರಣ ದಾಖಲಾಗಿರುತ್ತದೆ.