Home Crime ಶಿರ್ವ : ಮ‌ನೆಗೆ ಬಾರದೇ ನಾಪತ್ತೆಯಾದ ಯುವಕ…!!

ಶಿರ್ವ : ಮ‌ನೆಗೆ ಬಾರದೇ ನಾಪತ್ತೆಯಾದ ಯುವಕ…!!

ಶಿರ್ವ: ಉಡುಪಿ ಜಿಲ್ಲೆಯ ಶಿರ್ವ ಸಮೀಪ ಯುವಕನೋರ್ವ ಮನೆಯಿಂದ ಹೋದವನು ಕೆಲಸಕ್ಕೂ ಹೋಗದೇ ವಾಪಾಸು ಮನೆಗೂ ಬಾರದೇ ಕಾಣೆಯಾದ ಘಟನೆ ನಡೆದಿದೆ.

ನಾಪತ್ತೆಯಾದ ಯುವಕ ಸಚಿನ್ ಎಸ್ ಸಾಲಿಯಾನ್ ಎಂದು ತಿಳಿದು ಬಂದಿದೆ.

ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ : ಪಿರ್ಯಾದಿದಾರ ಸಾಧು ಸಾಲಿಯಾನ್(71) ತಂದೆ:ದಿವಂಗತ ಸೂರು ಮಡಿವಾಳ, ವಾಸ: ಮನೆ ನಂಬ್ರ:4-175, ಮಡಿವಾಳ ತೋಟದ ಮನೆ, ಪಾಂಬೂರು ಅಂಚೆ, ಬೆಳ್ಳೆ ಗ್ರಾಮ, ಕಾಫು ಇವರ ಮಗ ಸಚಿನ್ ಎಸ್ ಸಾಲಿಯಾನ್ (33) ಈತನು ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದು ದಿನಾಂಕ:13.01.2026 ರಂದು ಬೆಳಿಗ್ಗೆ 08:30 ಗಂಟೆಗೆ KA20EZ 7260 ನೇ ನೊಂದಣಿ ಸಂಖ್ಯೆಯ ಸ್ಕೂಟರನ್ನು ಸವಾರಿ ಮಾಡಿಕೊಂಡು ಕೆಲಸಕ್ಕೆಂದು ಪಿರ್ಯಾದಿದಾರರ ಮನೆಯಿಂದ ಹೋದವನು ಕೆಲಸಕ್ಕೂ ಹೋಗದೇ ವಾಪಾಸು ಮನೆಗೂ ಬಾರದೇ ಕಾಣೆಯಾಗಿರುತ್ತಾನೆ.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 06/2026 ಕಲಂ:ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ