Home Crime ಬೈಂದೂರು : ಯುವಕನೋರ್ವ ಆತ್ಮಹತ್ಯೆ…!!

ಬೈಂದೂರು : ಯುವಕನೋರ್ವ ಆತ್ಮಹತ್ಯೆ…!!

ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ಸಮೀಪ ಯುವಕನೋರ್ವ ಮನೆಯ ಕೊಠಡಿಯ ಮಾಡಿನ ಪಕಾಸಿಗೆ ಹಗ್ಗವನ್ನು ಕಟ್ಟಿ ನೇಣು‌ ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.

ಆತ್ಮಹತ್ಯೆಗೆ ಶರಣಾದ ಯುವಕ ಗೋವರ್ಧನ ಎಂದು ತಿಳಿದು ಬಂದಿದೆ.

ಇದರ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ: ಪಿರ್ಯಾದುದಾರ ಜಗದೀಶ (38) ತಂದೆ: ವೆಂಕಟ ಖಾರ್ವಿ ವಾಸ:ಕೆರೆಗಕಳಿ ಉಪ್ಪುಂದ ಗ್ರಾಮ, ಇವರ ತಮ್ಮ ಗೋವರ್ಧನ (35)ರವರು ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು ಜೀವನದಲ್ಲಿ ಯಾವುದೋ ಸಮಸ್ಯೆಯಿಂದ ಜಿಗುಪ್ಸೆಗೊಂಡು ಈ ದಿನ ದಿನಾಂಕ: 01/02/2026 ರಂದು ಬೆಳಿಗ್ಗೆಅವರ ಮನೆಯ ಕೊಠಡಿಯ ಮಾಡಿನ ಪಕಾಸಿಗೆ ಹಗ್ಗವನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡು ನೇತ್ತಾಡುತ್ತಿದ್ದವರನ್ನು 6:45 ಗಂಟೆಗೆ ನೋಡಿದ ಫಿರ್ಯಾಧಿದಾರು ಹಾಗೂ ಇತರರು ಸೇರಿ ಕುತ್ತಿಗೆಯ ಹಗ್ಗವನ್ನು ಕತ್ತರಿಸಿ ಕೆಳಗಿಳಿಸಿ ಹಗ್ಗವನ್ನು ಬಿಚ್ಚಿ ಚಿಕಿತ್ಸೆಯ ಬಗ್ಗೆ ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ 7:45 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ.

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಯುಡಿಆರ್‌ ಕ್ರಮಾಂಕ: 10/2026 ಕಲಂ 194 BNSS ರಂತೆ ಪ್ರಕರಣ ದಾಖಲಿಸಲಾಗಿದೆ