ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಯುವಕನೋರ್ವ ಕೆ.ಇ.ಬಿ ಕಂಬದ ಮೇಲೆ ಕೆಲಸ ಮಾಡುತ್ತಿರುವಾಗ ವಿಪರೀತ ಗುಡುಗು ಮಳೆಯಿಂದ ಆಕಸ್ಮಿಕವಾಗಿ ಕಂಬದ ಮೇಲಿನಿಂದ ಕೆಳಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಸಾವನ್ನಪ್ಪಿದ ಯುವಕ ಬಸುಮತ್ರಿ ಎಂದು ತಿಳಿದು ಬಂದಿದೆ.
ಈ ಘಟನೆ ಬಗ್ಗೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ವಿವರ : ಪಿರ್ಯಾದುದಾರ ರಾದ ಅಸ್ಸಾಂ ರಾಜ್ಯದ ಆಶಿರ್ ಮೊಸಹರಿ ಇವರ ಸಹೋದರ ಸ್ವಂಕಾರ್ ಬಸುಮತ್ರಿ, ಪ್ರಾಯ 29 ವರ್ಷ, ಇವರು ಹೆಬ್ರಿಯ ಶಿವಪುರದ ಶಿವ ಎಲೆಕ್ಟ್ರಿಕಲ್ ಇಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 14/01/2026 ರಂದು ಸಂಜೆ 4:15 ಗಂಟೆಗೆ ಕಾರ್ಕಳ ತಾಲೂಕು, ಮುಡಾರು ಗ್ರಾಮದ ಬಜಗೋಳಿಯ ಅಬ್ಬೆಂಜಾಲು ಎಂಬಲ್ಲಿ ತನ್ನ ಜೊತೆಗಾರರಾದ ರುಬಾಂಗ್ ಹಾಗೂ ಇತರರ ಜೊತೆ ಹಳೆ ಕೆ.ಇ.ಬಿ. ಕಂಬದ ಪಕ್ಕದಲ್ಲಿ ಹೊಸದಾಗಿ ಕೆ.ಇ.ಬಿ. ಕಂಬ ಅಳವಡಿಸಿ, ಸದರಿ ಕಂಬದಲ್ಲಿ ಕೆಲಸ ಮಾಡಿಕೊಂಡಿರುವಾಗ ವಿಪರೀತ ಸಿಡಿಲು, ಗುಡುಗು, ಮಳೆ ಬರುತ್ತಿದ್ದು ಈ ಸಮಯ ಸಿಡಿಲು ಯಾ ಇತರೇ ಕಾರಣದಿಂದ ಅಕಸ್ಮಿಕವಾಗಿ ವಿದ್ಯುತ್ ಕಂಬದ ಮೇಲಿನಿಂದ ಕೆಳಕ್ಕೆ ಬಿದ್ದು, ತೀವೃ ಅಸ್ವಸ್ಥಗೊಂಡ ಸ್ವಂಕಾರ್ ಬಸುಮತ್ರಿ ಇವರನ್ನು ಚಿಕಿತ್ಸೆ ಬಗ್ಗೆ ಕಾರ್ಕಳದ ಟಿ.ಎಂ.ಎ. ರೋಟರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯ ವೈದ್ಯರು ಪರೀಕ್ಷಿಸಿ ಗಾಯಾಳು ಸ್ವಂಕಾರ್ ಬಸುಮತ್ರಿ ಇವರು ದಾರಿ ಮಧ್ಯೆ ಮೃತಪಟ್ಟ ಬಗ್ಗೆ ತಿಳಿಸಿರುವುದಾಗಿದೆ.
ಈ ಬಗ್ಗೆ ಯು.ಡಿ.ಆರ್ ಕ್ರಮಾಂಕ: 01/2026 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.



