ಕಾರ್ಕಳ : ವೃದ್ಧರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಜೆಕಾರು ಮರ್ಣೆ ಗ್ರಾಮದಲ್ಲಿ ಸಂಭವಿಸಿದೆ.
ದೇವರಾಯ ಹೆಗ್ಡೆ (80) ನೇಣಿಗೆ ಶರಣಾದವರು ಎಂದು ತಿಳಿದು ಬಂದಿದೆ.
ದೇವರಾಯ ಅವರ ಹೆಂಡತಿ ಒಂದು ವರ್ಷದ ಹಿಂದೆ ನಿಧನರಾಗಿದ್ದು ಆ ಬಳಿಕ ದೇವರಾಯ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಜ. 15ರ ರಾತ್ರಿ ಅವರು ಊಟ ಮಾಡಿ ಮಲಗಿದ್ದು, ಜ.16ರ ಬೆಳಗ್ಗೆ ಸೊಸೆ ಮನೆಯ ಹಿಂಬಾಗಿಲು ತೆರೆದು ಹೊರಗೆ ಹೋದಾಗ ಮನೆಯ ಹಿಂಬದಿಯ ಮಾಡಿನ ಪಕ್ಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.
ದೇವರಾಯ ಹೆಗ್ಡೆ ಅವರು ಮಾನಸಿಕ ಖಿನ್ನತೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಗ ದಾಮೋದರ ಹೆಗ್ಡೆ ನೀಡಿದ ಮಾಹಿತಿಯಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.



