Home Crime ಉಡುಪಿ : ಕುತ್ತಿಗೆಗೆ ನೇಣು ಬಿಗಿದು ವ್ಯಕ್ತಿಯೋರ್ವ ಆತ್ಮಹತ್ಯೆ…!!

ಉಡುಪಿ : ಕುತ್ತಿಗೆಗೆ ನೇಣು ಬಿಗಿದು ವ್ಯಕ್ತಿಯೋರ್ವ ಆತ್ಮಹತ್ಯೆ…!!

ಉಡುಪಿ: ನಗರದ ಸಮೀಪ ವ್ಯಕ್ತಿಯೋರ್ವ ಸಂಜೆ ಹೊತ್ತಿಗೆ ಸರಾಯಿ ಕುಡಿದು ಮನೆಗೆ ಬಂದು ಹೆಂಡತಿಯೊಂದಿಗೆ ಜಗಳ ಮಾಡಿ ಮನೆಯಿಂದ ಸ್ವಲ್ಪ ದೂರದಲ್ಲಿರುವ ತೆಂಗಿನ ಮರಕ್ಕೆ ನೈಲಾನ್‌ ಹಗ್ಗವನ್ನು ಬಿಗಿದು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಆತ್ಮಹತ್ಯೆಗೆ ಮಾಡಿಕೊಂಡ ವ್ಯಕ್ತಿ ನಾಗಪ್ಪ ಕೇರಿ ಎಂದು ತಿಳಿದು ಬಂದಿದೆ.

ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ : ಪಿರ್ಯಾದಿದಾರರಾದ ಸಣ್ಣಲಕ್ಷ್ಮೀ ಕೇರಿ(40), ಮೂಡನಿಡಂಬೂರು ಗ್ರಾಮ, ಉಡುಪಿ ಇವರ ಗಂಡ ನಾಗಪ್ಪ ಕೇರಿ (49) ಇವರು ಶರಾಬು ಕುಡಿಯುವ ಹವ್ಯಾಸದವರಾಗಿದ್ದು . ಪ್ರತಿದಿನ ಮನೆಯಲ್ಲಿ ಶರಾಬು ಕುಡಿದು ಬಂದು ಹೆಂಡತಿಯೊಂದಿಗೆ ಗಲಾಟೆ ಮಾಡುತ್ತಿದ್ದು ದಿನಾಂಕ 10/01/2026 ರಂದು ಸಂಜೆ ಹೊತ್ತಿಗೆ ಸರಾಯಿ ಕುಡಿದು ಮನೆಗೆ ಬಂದು ಹೆಂಡತಿಯೊಂದಿಗೆ ಗಲಾಟೆ ಮಾಡಿ 19:30 ಗಂಟೆಗೆ ಮನೆಯಿಂದ ಹೋದವರು 19:45 ಗಂಟೆಗೆ ಸುಮಾರಿಗೆ ಮನೆಯಿಂದ ಸ್ವಲ್ಪ ದೂರದಲ್ಲಿರುವ ತೆಂಗಿನ ಮರಕ್ಕೆ ನೈಲಾನ್‌ ಹಗ್ಗವನ್ನು ಬಿಗಿದು ಕುತ್ತಿಗೆಗೆ ನೇಣು ಬಿಗಿದು ನೇತಾಡುತ್ತಿದ್ದವರನ್ನು ನೋಡಿ ನೆರೆಕೆರೆಯವರು ಸೇರಿ ನಾಗಪ್ಪ ಕೇರಿರವರು ಬಿಗಿದುಕೊಂಡಿದ್ದ ನೇಣು ಹಗ್ಗವನ್ನು ಕತ್ತರಿಸಿ ಚಿಕಿತ್ಸೆಯ ಬಗ್ಗೆ ಉಡುಪಿ ಗಾಂಧಿ ಆಸ್ಪತ್ರೆಗೆ ಕರೆದುಕೊಂಡು ಬಂದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ವೈದ್ಯ ರು ಪರೀಕ್ಷಿಸಿ ಈಗಾಗಲೆ ಮೃತಪಟ್ಟಿರುವುದಾಗಿ 21:49 ಗಂಟೆಗೆ ತಿಳಿಸಿರುತ್ತಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 003/2026 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.