Home Crime ಬೆಳ್ತಂಗಡಿ: ವಿದ್ಯುತ್ ಲೈನ್ ಕಾಮಗಾರಿ ನಿರ್ವಹಿಸುತ್ತಿದ್ದ ಯುವಕ ಮೃತ್ಯು…!!

ಬೆಳ್ತಂಗಡಿ: ವಿದ್ಯುತ್ ಲೈನ್ ಕಾಮಗಾರಿ ನಿರ್ವಹಿಸುತ್ತಿದ್ದ ಯುವಕ ಮೃತ್ಯು…!!

ಬೆಳ್ತಂಗಡಿ: ವಿದ್ಯುತ್ ಲೈನ್ ಕಾಮಗಾರಿ ನಿರ್ವಹಿಸುತ್ತಿದ್ದ ವೇಳೆ ಕಂಬದಿಂದ ಬಿದ್ದು ಖಾಸಗಿ ಗುತ್ತಿಗೆ ಕಂಪನಿಯೊಂದರ ನೌಕರ ಮೃತಪಟ್ಟ ಘಟನೆ ಇಂದಬೆಟ್ಟುವಿನ ಕಜೆ ಎಂಬಲ್ಲಿ ಗುರುವಾರ ವರದಿಯಾಗಿದೆ.

ಮೃತ ಯುವಕನನ್ನು ಬಂಟ್ವಾಳದ ಕಾವಳಮೂಡೂರು ಗ್ರಾಮದ ಎನ್ ಸಿ ರೋಡ್ ನಿವಾಸಿ ಅಕ್ಬರ್ ಅಲಿ (22) ಎಂದು ಗುರುತಿಸಲಾಗಿದೆ.

ವಿದ್ಯುತ್ ಕಂಬದ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.