Home Karnataka News ಮೈಸೂರು ನಗರ ನೂತನ‌ ಪೊಲೀಸ್ ಆಯುಕ್ತರಾಗಿ ಎನ್.ವಿಷ್ಣುವರ್ಧನ್ ನೇಮಕ…!!

ಮೈಸೂರು ನಗರ ನೂತನ‌ ಪೊಲೀಸ್ ಆಯುಕ್ತರಾಗಿ ಎನ್.ವಿಷ್ಣುವರ್ಧನ್ ನೇಮಕ…!!

ಮೈಸೂರು: ನಗರದ ನೂತನ ಪೊಲೀಸ್ ಆಯುಕ್ತರಾಗಿ ಎನ್. ವಿಷ್ಣುವರ್ಧನ್‌ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ವಿಷ್ಣುವರ್ಧನ್ ಅವರು ಇಲ್ಲಿಯವರೆಗೆ ನಗರದ ಕರ್ನಾಟಕ ಪೊಲೀಸ್ ಅಕಾಡೆಮಿಯ (ಕೆಪಿಎ) ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. 2024ರ ಜುಲೈ 5ರಿಂದ ಮೈಸೂರು ನಗರ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಸೀಮಾ ಲಾಟ್ಕರ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಎನ್. ವಿಷ್ಣುವರ್ಧನ್‌ ಅವರನ್ನು ನಿಯೋಜಿಸಲಾಗಿದೆ.

ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಸೇವೆಗಳು-4) ಸರಕಾರದ ಅಧೀನ ಕಾರ್ಯದರ್ಶಿ ಬಿ.ಎಸ್. ಸಂಜಯ್ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.