ಕೋಟ: ಮನೆಯಿಂದ ವೃದ್ಧರೊಬ್ಬರು ನಾಪತ್ತೆಯಾದ ಘಟನೆ ಕೋಟೇಶ್ವರ ವ್ಯಾಪ್ತಿಯ ಬೀಜಾಡಿ ಗ್ರಾಮದಲ್ಲಿ ನಡೆದಿದೆ.
ಬೀಜಾಡಿ ಗ್ರಾಮದ ನಿವಾಸಿ ಸಂತೋಷ (53) ಅವರ ತಂದೆ ಗಣಪ ಮರಕಾಲ (80) ಕಳೆದ 10 ವರ್ಷದಿಂದ ಮಗಳು ಕವಿತಾ ಅವರ ಮನೆಯಲ್ಲಿ ವಾಸವಾಗಿದ್ದರು.
ರಾತ್ರಿ 9 ಗಂಟೆಗೆ ಮನೆಯವರೊಂದಿಗೆ ಊಟ ಮುಗಿಸಿ ಟಿವಿ ನೋಡುತ್ತಿದ್ದ ಗಣಪ ಅವರು ಮರುದಿನ ಬೆಳಿಗ್ಗೆ 6 ಗಂಟೆಗೆ ಮನೆಯಲ್ಲಿ ಕಾಣಿಸಿಕೊಂಡಿಲ್ಲ. ಕುಟುಂಬದವರು ಮನೆಯ ವಠಾರ, ಸುತ್ತಮುತ್ತ, ನೆರೆಕರೆಯವರ ಮನೆ ಹಾಗೂ ಸಂಬಂಧಿಕರಿಗೆ ಕರೆ ಮಾಡಿ ವಿಚಾರಿಸಿದರೂ ಪತ್ತೆಯಾಗಿಲ್ಲ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಅ.ಕ್ರ 168/2026 ರಂತೆ ನಾಪತ್ತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.



