Home Crime ದ್ವಿಚಕ್ರ ವಾಹನಕ್ಕೆ ಬಸ್ ಢಿಕ್ಕಿ : ತಂದೆ-ಮಗಳು ಸ್ಥಳದಲ್ಲೇ ಮೃತ್ಯು…!!

ದ್ವಿಚಕ್ರ ವಾಹನಕ್ಕೆ ಬಸ್ ಢಿಕ್ಕಿ : ತಂದೆ-ಮಗಳು ಸ್ಥಳದಲ್ಲೇ ಮೃತ್ಯು…!!

ಗಂಗಾವತಿ: ರಾಯಚೂರು ರಸ್ತೆಯ ಡಣಾಪುರ ಕ್ರಾಸ್ ತಿರುವಿನಲ್ಲಿ ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿಯಾಗಿ ತಂದೆ-ಮಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟವರು ಖಾಜಾಸಾಬ (55) ಮತ್ತು ಮಗಳು 8 ನೇ ತರಗತಿ ಓದುತ್ತಿದ್ದ ಆಸೀನ್ ಖಾಜಾಸಾಬ (14) ಎಂದು ತಿಳಿದು ಬಂದಿದೆ.

ವೈಯಕ್ತಿಕ ಕೆಲಸದ ನಿಮಿತ್ತ ಇವರು ಗಂಗಾವತಿಗೆ ಬಂದು ಮರಳಿ ತಮ್ಮ ಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಕಾರಟಗಿ ಕಡೆಯಿಂದ ಬಂದ ಸರ್ಕಾರಿ ಬಸ್ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಸುದ್ದಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್ ವರಸಿದ್ದಿ ಹಾಗೂ ಗ್ರಾಮೀಣ ಠಾಣೆಯ ಪಿಐ ರಂಗಪ್ಪ ದೊಡ್ಡಮನಿ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.