ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ವ್ಯಕ್ತಿಯೊಬ್ಬರ ಮನೆಗೆ ಕಳ್ಳರು ನುಗ್ಗಿ ಬೆಳ್ಳಿಯ ಸಾಮಾಗ್ರಿಗಳನ್ನು ಕಳವು ಮಾಡಿದ ಘಟನೆ ಸಂಭವಿಸಿದೆ.
ವೈದ್ಯರಾದ ನಾರಾಯಣ ಮೂಲ್ಯ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ.
ಕಾರ್ಕಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣ ಸಾರಾಂಶ : ಪಿರ್ಯಾದಿದಾರರಾದ ಶ್ರೀನಿವಾಸ ನಾರಾಯಣ ಮೂಲ್ಯ(41), ಮಂಗಳೂರು ಇವರು ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದು, ದಿನಾಂಕ 01/01/2026 ರಂದು ಸಂಜೆ 5:30 ಗಂಟೆಯಿಂದ ದಿನಾಂಕ 07/01/2026 ರ ಸಂಜೆ 5:00 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ನಕ್ರೆ ಪರಪ್ಪು ಎಂಬಲ್ಲಿರುವ ಪಿರ್ಯಾದಿದಾರರ ಮನೆಯ ಮುಖ್ಯ ಬಾಗಿಲನ್ನು ಯಾವುದೋ ಸಾಧನದಿಂದ ಮೀಟಿ ತೆರೆದು ಒಳಪ್ರವೇಶಿಸಿ ಬೆಡ್ ರೂಮ್ನಲ್ಲಿದ್ದ ಕಪಾಟನ್ನು ತೆರೆದು ಅದರೊಳಗೆ ಇಟ್ಟಿದ್ದ ಬೆಳ್ಳಿಯ ಸಣ್ಣ ದೀಪ -2, ಬೆಳ್ಳಿಯ ದೊಡ್ಡ ದೀಪ -2, ಬೆಳ್ಳಿಯ ಚೆಂಬು -1 , ಬೆಳ್ಳಿಯ ತಟ್ಟೆ – 1 ಹಾಗೂ 3 ಗ್ರಾಂ ತೂಕದ ಒಂದು ಚಿನ್ನದ ಒಡ್ಡುಂಗುರವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 04/2026 ಕಲಂ: 331(3), 331(4), 305 BNS ರಂತೆ ಪ್ರಕರಣ ದಾಖಲಾಗಿರುತ್ತದೆ.



