Home Crime ಕೊಲ್ಲೂರು : ವ್ಯಕ್ತಿಯೋರ್ವರ ಮೇಲೆ ಮೂರು ಮಂದಿ ಸೇರಿ ಹಲ್ಲೆ…!!

ಕೊಲ್ಲೂರು : ವ್ಯಕ್ತಿಯೋರ್ವರ ಮೇಲೆ ಮೂರು ಮಂದಿ ಸೇರಿ ಹಲ್ಲೆ…!!

ಕೊಲ್ಲೂರು: ಉಡುಪಿ ಜಿಲ್ಲೆಯ ಕೊಲ್ಲೂರು ‌ಸಮೀಪ ವ್ಯಕ್ತಿಯೋರ್ವರು ರಸ್ತೆಗೆ ಕೆಂಪು ಮಣ್ಣನ್ನು ಹಾಕಿ ರಿಪೇರಿ ಮಾಡಿಕೊಂಡಿರುವ ಸಮಯದಲ್ಲಿ ಮೂರು ಮಂದಿ ಸೇರಿ‌ ಅವರಿಗೆ ಹಲ್ಲೆ ಮಾಡಿದ ಘಟನೆ ನಡೆದಿದೆ.

ಆರೋಪಿಗಳಾದ ದಿನೇಶ ನಾಯಕ್‌‌‌‌, ಕೃಷ್ಣನಂದ ನಾಯಕ್‌‌‌,ಹಾಗೂ ಮುಕ್ತ ನಾಯಕ್‌‌‌ ಎಂದು ಗುರುತಿಸಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಕೊಲ್ಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ : ದಿನಾಂಕ 04/01/2026 ರಂದು ಸಂಜೆ 4:00 ಗಂಟೆಗೆ ಪಿರ್ಯಾದಿದಾರರಾದ ಸಂಗೀತಾ ಶೆಟ್ಟಿ (50),ಚಿತ್ತೂರು ಗ್ರಾಮ ಕುಂದಾಪುರ ಇವರ ಮನೆಗೆ ಬರುವ ರಸ್ತೆಗೆ ಪಿರ್ಯಾದಿದಾರರು ಕೆಂಪು ಮಣ್ಣನ್ನು ಹಾಕಿ ರಿಪೇರಿ ಮಾಡಿಕೊಂಡಿರುವ ಸಮಯದಲ್ಲಿ, ಆಪಾದಿತರಾದ ದಿನೇಶ ನಾಯಕ್‌‌‌‌, ಕೃಷ್ಣನಂದ ನಾಯಕ್‌‌‌,ಹಾಗೂ ಮುಕ್ತ ನಾಯಕ್‌‌‌ ಇವರು ಸೇರಿಕೊಂಡು ತಡೆದು ನಿಲ್ಲಿಸಿ ಕೆಟ್ಟ ಶಬ್ಬಗಳಿಂದ ಬೈದು, ದಿನೇಶ ನಾಯಕ್‌‌‌‌ ಹಾಗೂ ಕೃಷ್ಣನಂದ ನಾಯಕ್‌‌‌ ಸೇರಿಕೊಂಡು ಹಲ್ಲೆ ಮಾಡಿದ್ದು, ಮುಕ್ತ ನಾಯಕ್‌‌‌ ಕೈಯಿಂದ ಹೊಡೆದಿದ್ದು ಆಪಾದಿತರು ಜೀವ ಬೆದರಿಕೆ ಹಾಕಿರುತ್ತಾರೆ.

ಈ ಘಟನೆಯಿಂದ ಕಿವಿ ನೋವು ಹೆಚ್ಚಾಗಿ ದಿನಾಂಕ 05/01/2026 ರಂದು ಕುಂದಾಪುರ ಸರಕಾರಿ ಆಸ್ಪತ್ರೆಗೆ ಹೋಗಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುವುದಾಗಿ ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 02/2026 ಕಲಂ: 126(2),352,115(2),74,351(2), R/W 3(5) BNS ರಂತೆ ಪ್ರಕರಣ ದಾಖಲಾಗಿರುತ್ತದೆ.