Home Crime ಹಿರಿಯಡ್ಕ: ಪಾಳುಬಿದ್ದ ರೈಸ್ ಮಿಲ್ ನಲ್ಲಿ ಕೇರಳ ಮೂಲದ ಕಾರ್ಮಿಕ ಆತ್ಮಹತ್ಯೆ…!!

ಹಿರಿಯಡ್ಕ: ಪಾಳುಬಿದ್ದ ರೈಸ್ ಮಿಲ್ ನಲ್ಲಿ ಕೇರಳ ಮೂಲದ ಕಾರ್ಮಿಕ ಆತ್ಮಹತ್ಯೆ…!!

ಉಡುಪಿ: ಬಾವಿ ರಿಂಗ್ ಕೆಲಸಕ್ಕೆಂದು ಬಂದಿದ್ದ ಕೇರಳ ಮೂಲದ ಕಾರ್ಮಿಕನೊಬ್ಬ ಹಿರಿಯಡ್ಕ ಸಮೀಪದ ಪಾಳುಬಿದ್ದ ರೈಸ್ ಮಿಲ್ ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಭವಿಸಿದೆ.

ಪಿರ್ಯಾದಿದಾರರಾದ ಮನೋಜ್*55, ಇವರು ಹೆಬ್ರಿ ತಾಲೂಕು ಮುದ್ರಾಡಿ ಗ್ರಾಮದ ನಿವಾಸಿ. ಇವರಿಗೆ ಕೇರಳದ ಕೊಟ್ಟಾರಕೆರೆ ವಾಸಿ ಬಿಜು ಎಂಬವರ ಪರಿಚಯವಿದೆ. ಬಿಜು ಅವರು ಹಿರಿಯಡ್ಕ ಸಮೀಪ ಬಾವಿ-ರಿಂಗ್ ಮಾಡುವ ಕೆಲಸ ಮಾಡುತ್ತಿದ್ದು, ಅವರ ಬಳಿ 20-25 ಜನ ಕೇರಳ ಮೂಲದ ಕಾರ್ಮಿಕರು ಕೆಲಸ ಮಾಡುತ್ತಿದ್ದರು.

ಆದರಲ್ಲಿ ಕೇರಳ ಕೊಟ್ಟಾರಕೆರೆ ನಿವಾಸಿ ಸಜಿಕುಮಾರ್ 53, ಕೂಡ ಕೆಲಸ ಮಾಡುತ್ತಿದ್ದನು. ಜೂನ್ ತಿಂಗಳಿನಲ್ಲಿ ಮಳೆಗಾಲ ಇರುವುದರಿಂದ ಎಲ್ಲಾ ಕಾರ್ಮಿಕರು ತಮ್ಮ ತಮ್ಮ ಊರಿಗೆ ತೆರಳಿದ್ದರು.

ದಿನಾಂಕ 22/08/2026 ರಂದು ಬೆಳಿಗ್ಗೆ 11:00 ಗಂಟೆಗೆ ಬಿಜು ಅವರು ಮನೋಜ್ ಅವರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಬಾವಿ ರಿಂಗ್ ನಿರ್ಮಾಣ ಮಾಡುವ ಜಾಗದ ಪಕ್ಕದಲ್ಲಿರುವ ಪಾಳುಬಿದ್ದ ಹಂಚಿನ ರೈಸ್ ಮಿಲ್ ನ ಒಳಗಿನ ಒಂದು ಕೋಣೆಯಲ್ಲಿ ಸಜಿಕುಮಾರ್ ಲುಂಗಿಯ ಒಂದು ತುದಿಯನ್ನು ನೇಣಾಗಿ ಮಾಡಿ ಕುತ್ತಿಗೆಗೆ ಬಿಗಿದುಕೊಂಡು, ಇನ್ನೊಂದು ತುದಿಯನ್ನು ಮರದ ಜಂತಿಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.

ಸ್ಥಳಕ್ಕೆ ತೆರಳಿ ನೋಡಿದಾಗ ಸಜಿಕುಮಾರ್ ಅವರ ಮೃತದೇಹವು ರೈಸ್ ಮಿಲ್ ಕೋಣೆಯೊಳಗೆ ಮರದ ಜಂತಿಗೆ ನೇಣು ಬಿಗಿದುಕೊಂಡು ನೇತಾಡಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಈ ಸಂಬಂಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 30/2026 ಕಲಂ: 194 BNSS ರಂತೆ ಪ್ರಕರಣ ದಾಖಲಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.