Home Crime ದಕ್ಷಿಣ ಭಾರತದ ಕುಖ್ಯಾತ ಕಳ್ಳನ ಬಂಧನ :  55 ಗ್ರಾಂ ತೂಕದ ಚಿನ್ನ ವಶಕ್ಕೆ…!!

ದಕ್ಷಿಣ ಭಾರತದ ಕುಖ್ಯಾತ ಕಳ್ಳನ ಬಂಧನ :  55 ಗ್ರಾಂ ತೂಕದ ಚಿನ್ನ ವಶಕ್ಕೆ…!!

ಕಾಪು : ಉಡುಪಿ ಜಿಲ್ಲೆಯ ಕಾಪು ಸಮೀಪ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ದಕ್ಷಿಣ ಭಾರತದ ಕುಖ್ಯಾತ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಉಮೇಶ್ ಬಳೆಗಾರ ಯಾನೆ ಉಮೇಶ್ ರೆಡ್ಡಿ ಎಂದು ತಿಳಿದು ಬಂದಿದೆ. ಬಂಧಿತ ಆರೋಪಿಯಿಂದ 55 ಗ್ರಾಂ ತೂಕದ ಚಿನ್ನ ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ವಿವರ : 02/01/2026 ರಂದು ಕಾಪು ಪ್ರಕರಣವೊಂದರಲ್ಲಿ ದಸ್ತಗಿರಿ ಮಾಡಿರುವ ಕುಖ್ಯಾತ ಕಳ್ಳ ಉಮೇಶ @ ಉಮೇಶ ಬಳೆಗಾರ @ ಉಮೇಶ ರೆಡ್ಡಿ(47), ತಂದೆ: ಪ್ರಭಾಕರ ಬಳೆಗಾರ, ಖಾಯಂ ವಾಸ: ಬಳೆಗಾರ ಮನೆ ಫಕೀರ್ಣಕಟ್ಟೆ, ಮಲ್ಲಾರು ಗ್ರಾಮ, ಕಾಪು ತಾಲೂಕು ಈತನು ತಾನು ದಿನಾಂಕ 04/12/2025 ರಂದು ಕಾಪು ತಾಲೂಕು ಮಲ್ಲಾರು ಗ್ರಾಮದ ಕಾಪು ಮುಖ್ಯ ರಸ್ತೆಯಲ್ಲಿರುವ ರಾಘವೇಂದ್ರ ಕಿಣಿ ಎಂಬವರ ಮನೆಯಲ್ಲಿ ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ತಮಿಳುನಾಡು ರಾಜ್ಯದ ಮಧುರೈ ಎಂಬಲ್ಲಿ ಮಾರಾಟ ಮಾಡಿರುವುದಾಗಿ ತಪೊಪ್ಪಿಕೊಂಡಿರುತ್ತಾನೆ.

ಕಾರ್ಕಳ ಉಪ ವಿಭಾಗದ ಪ್ರಭಾರ ಪೊಲೀಸ್ ಉಪಾಧೀಕ್ಷಕರಾದ ಪ್ರಭು ಡಿ ಟಿ ರವರ ನೇತೃತ್ವದಲ್ಲಿ ತನಿಖಾಧಿಕಾರಿ ಕಾಪು ವೃತ್ತ ನಿರೀಕ್ಷಕರಾದ ಅಝಮತ್‌ ಅಲಿ ಜಿ ರವರ ತಂಡ ಪತ್ತೆ ಕಾರ್ಯಾಚರಣೆ ನಡೆಸಿ, ಅಪರಾಧ ಪತ್ತೆದಳದ ಸಿಬ್ಬಂದಿಯವರೊಂದಿಗೆ ಆರೋಪಿ ಉಮೇಶ್ ಬಳೆಗಾರ ನನ್ನು ಕರೆದುಕೊಂಡು ತಮಿಳುನಾಡು ರಾಜ್ಯದ ಮಧುರೈ ಎಂಬಲ್ಲಿಗೆ ತೆರಳಿ ಆರೋಪಿಯು ಕಳವು ಮಾಡಿದ ಚಿನ್ನಾಭರಣಗಳನ್ನು ಆರೋಪಿ ತೋರಿಸಿಕೊಟ್ಟಂತೆ ಪತ್ತೆ ಹಚ್ಚಿ 55 ಗ್ರಾಂ ತೂಕದ ಚಿನ್ನದ ಗಟ್ಟಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಸ್ವತ್ತು ಸ್ವಾಧೀನತಾ ಕಾರ್ಯಾಚರಣೆಯಲ್ಲಿ ಕಾಪು ವೃತ್ತ ನಿರೀಕ್ಷಕರಾದ ಅಝಮತ್‌ ಅಲಿ ಜಿ ರವರ ಜೊತೆ ಜಿಲ್ಲಾ ಬೆರಳು ಮುದ್ರೆ ಘಟಕದ ತಜ್ಞೆ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಮತಿ ಎಲ್ ಮೋಹನ ಕುಮಾರಿ ಹಾಗೂ ಅವರ ಸಿಬ್ಬಂದಿ, ಕಾಪು ಪೊಲೀಸ್‌ ಠಾಣೆಯ ಪಿ.ಎಸ್.ಐ ಶುಭಕರ, ಪಡುಬಿದ್ರಿ ಪೊಲೀಸ್ ಠಾಣೆಯ ಪಿ.ಎಸ್.ಐ ಅನಿಲ್ ಕುಮಾರ ಟಿ ನಾಯ್ಕ್, ಎ ಎಸ್ ಐ ರಾಜೇಶ್ ಪಿ, ಕಾರ್ಕಳ ಗ್ರಾಮಾಂತರ ಠಾಣಾ ಎ ಎಸ್ ಐ ಪ್ರಕಾಶ್, ಶಿರ್ವ ಪೊಲೀಸ್ ಠಾಣಾ ಎಚ್ ಸಿ ಕಿಶೋರ್ , ಕಾಪು ವೃತ್ತ ನಿರೀಕ್ಷಕರ ಕಚೇರಿಯ ಸಿಬ್ಬಂದಿ ಹೆಚ್ ಸಿ ರಿಯಾಜ್‌ ಅಹ್ಮದ್, ಪಿ ಸಿ ಶರಣಪ್ಪ, ಜೀವನ್ ಕುಮಾರ್, ದಿನೇಶ್ ಕುಮಾರ್, ಮಹಿಳಾ ಪಿ ಸಿ ಪಾವನಾಂಗಿ ಡಿ ಹೆಚ್, ಕಾಪು ಪೊಲೀಸ್ ಠಾಣಾ ಸಿಬ್ಬಂದಿ ಮೋಹನ್ ಚಂದ್ರ, ರಾಘು, ಮತ್ತು ಕಾಪು ವೃತ್ತ ನಿರೀಕ್ಷಕರ ಜೀಪು ಚಾಲಕ ಜಗದೀಶ್ ಮತ್ತು ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯ ಸಿಡಿಆರ್ ವಿಭಾಗದ ಸಿಬ್ಬಂದಿ ದಿನೇಶ್ ಮತ್ತು ನಿತಿನ್ ಸಹಕರಿಸುತ್ತಾರೆ.