ಶಿರ್ವ: ಪಂಜಿಮಾರು ಸಮೀಪದ ಕೋಡು-ಪಾಲಮೆ ಎಂಬಲ್ಲಿ ರಸ್ತೆಯ ಹೊಂಡ ತಪ್ಪಿಸುವ ಭರದಲ್ಲಿ ನಿಯಂತ್ರಣ ತಪ್ಪಿ ಬಿದ್ದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಕುರ್ಕಾಲು ಗ್ರಾಮದ ಗಣೇಶ್ ಎಂಬವರ ಪತ್ನಿ ರಾಜೇಶ್ವರಿ (47) ಎಂದು ಗುರುತಿಸಲಾಗಿದೆ.
ಆ.9ರಂದು ಮಧ್ಯಾಹ್ನ ಗಣೇಶ್ ಸ್ಕೂಟರ್‌ನಲ್ಲಿ ತನ್ನ ಪತ್ನಿಯನ್ನು ಹಿಂಬದಿ ಸವಾರಳನ್ನಾಗಿ ಕುಳ್ಳಿರಿಸಿಕೊಂಡು ಶಿರ್ವ ಪೇಟೆಗೆ ಹೊರಟಿದ್ದರು. ಈ ಸಂದರ್ಭ ಗಣೇಶ್ ರಸ್ತೆಯಲ್ಲಿರುವ ಹೊಂಡವನ್ನು ತಪ್ಪಿಸುವಾಗ ಸ್ಕೂಟಿಯ ಮೇಲಿನ ನಿಯಂತ್ರಣ ತಪ್ಪಿ ಸ್ಕೂಟಿ ಸಹಿತ ಇಬ್ಬರು ರಸ್ತೆಗೆ ಬಿದ್ದರು ಎಂದು ತಿಳಿದು ಬಂದಿದೆ.
ಘಟನೆಯಿಂದ ಗಂಭೀರವಾಗಿ ಗಾಯಗೊಂಡ ರಾಜೇಶ್ವರಿ, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆ.10ರಂದು ಸಂಜೆ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




