ಉಡುಪಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ಕಾತ್ಯಾಯಿನಿ ಮಂಟಪ ಕಡಿಯಾಳಿಯಲ್ಲಿ ನಗರದ ಅಭ್ಯಾಸ ವರ್ಗವು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಡಾ.ಸತ್ಯನಾರಾಯಣ ಭಟ್ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಂಗಳೂರು ವಿಭಾಗ ಎಸ್‌ಎಫ್‌ಡಿ ಸಂಯೋಜಕರಾದ ಅನಂತ ಕೃಷ್ಣ, ಉಡುಪಿ ಜಿಲ್ಲಾ ಸಂಚಾಲಕರಾದ ರಂಜಿತ್ ಸಿದ್ದಾಪುರ,ತಾಲೂಕು ವಿದ್ಯಾರ್ಥನಿ ಪ್ರಮುಖ್ ನಿಹಾರಿಕಾ ಪೈ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭ , 2026-27ನೇ ಸಾಲಿನ ಕಾರ್ಯದರ್ಶಿಯಾಗಿ ಜವಾಬ್ದಾರಿಯನ್ನು ಸಂಚಿತ್ ಶೆಟ್ಟಿ , ಅಧ್ಯಕ್ಷರಾಗಿ ಪ್ರವೀಣ್ ಆಚಾರ್ಯ ಅನೇಕ ಜವಾಬ್ದಾರಿಗಳು ಈ ಸಂದರ್ಭದಲ್ಲಿ ಘೋಷಣೆಗೊಂಡವು.
ಮೊದಲ ಅವಧಿ ಸೈದ್ಧಾಂತಿಕ ಭೂಮಿಕೆ ಆಗಿದ್ದು , ಈ ಅವಧಿಯನ್ನು ಡಾ.ಶಿವಾನಂದ ನಾಯಕ್ ಅವರು ನಡೆಸಿಕೊಟ್ಟರು. ಎರಡನೆಯ ಅವಧಿಯು ಕ್ಯಾಂಪಸ್ ಕಾರ್ಯವಾಗಿದ್ದು, ಈ ಅವಧಿಯನ್ನು ಸುವಿತ್ ಶೆಟ್ಟಿ ರಾಜ್ಯ ಸಹ ಕಾರ್ಯದರ್ಶಿ ಇವರು ನೇರವೇರಿಸಿದರು. ಕಾರ್ಯಕ್ರಮದ ಕೊನೆಯ ಅವಧಿಯು ಪ್ರಶಿಕ್ಷಣವಾಗಿದ್ದು, ಹಿರಿಯ ಕಾರ್ಯಕರ್ತರಾದ ಅಜಿತ್ ಜೋಗಿ ಇವರು ನಡೆಸಿದರು.







