ಉಡುಪಿ : ನಗರದ ಆದಿ ಉಡುಪಿ ಸಂತೆ ಮಾರ್ಕೆಟ್ ನಲ್ಲಿ ಹಣು ಹಂಪಲು ಸಂಗ್ರಹ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ತಿಳಿದು ಬಂದಿದೆ.
ಇಂದು ಸಂತೆ ಮಾರ್ಕೆಟ್ ನ ಹಣ್ಣು ಹಂಪಲು ಅಂಗಡಿಗೆ ಶಾರ್ಟ್ ಸರ್ಕ್ಯೂಟ್ ನಿಂದ ಆಕಸ್ಮಿಕವಾಗಿ ಬೆಂಕಿ ತಗುಲಿದೆ ಎನ್ನಲಾಗಿದೆ.ಅಲ್ಲಿ ಹಣ್ಣು ಹಂಪಲು ಸಂಗ್ರಹಿಸಿದ್ದ ಬಾಕ್ಸ್ ಗೆ ಬೆಂಕಿ ತಗುಲಿ, ಅಂಗಡಿ ಸುಟ್ಟಿದೆ ಎಂದು ತಿಳಿದು ಬಂದಿದೆ.
ಅಗ್ನಿ ಶಾಮಕ ದಳದವರು ಕೂಡಲೇ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.




