Home Crime ಮಣಿಪಾಲ: ಮಹಿಳೆ ಮೇಲೆ ಬೀದಿ ನಾಯಿ ದಾಳಿ : ಆಸ್ಪತ್ರೆಗೆ ದಾಖಲು…!!

ಮಣಿಪಾಲ: ಮಹಿಳೆ ಮೇಲೆ ಬೀದಿ ನಾಯಿ ದಾಳಿ : ಆಸ್ಪತ್ರೆಗೆ ದಾಖಲು…!!

ಮಣಿಪಾಲ : ಉಡುಪಿ ನಗರಸಭಾ ವ್ಯಾಪ್ತಿಯ ಮಣಿಪಾಲದಲ್ಲಿ ಬೀದಿನಾಯಿಯೊಂದು ಮನೆಕೆಲಸದ ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿದೆ. ನೊಂದ ಅಸಹಾಯಕ ಮಹಿಳೆಗೆ ತುರ್ತು ನೆರವು ನೀಡಿ ವಿಶು ಶೆಟ್ಟಿ ಅಂಬಲಪಾಡಿ ಅವರು ಧೈರ್ಯ ತುಂಬಿದ ಘಟನೆ ನಡೆದಿದೆ.

ಒಂಟಿ ಮಹಿಳೆ ಹೊರಜಿಲ್ಲೆಯವರಾಗಿದ್ದು ಬಾಡಿಗೆ ಮನೆಯಲ್ಲಿ ವಾಸ ಮಾಡಿ ಬೇರೆಯವರ ಮನೆಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು.

ನಾಯಿ ದಾಳಿಯಿಂದಾಗಿ ಕನಿಷ್ಠ 2 ತಿಂಗಳು ಮಹಿಳೆಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ವೈದ್ಯರು ಸಲಹೆ ನೀಡಿದ್ದು ಜೀವನ ಸಾಗಿಸಲು ನೊಂದ ಮಹಿಳೆ ಸಂಬಂಧಪಟ್ಟವರಲ್ಲಿ ನೆರವು ಕೇಳಿದ್ದು ಸ್ಪಂದನೆ ಸಿಗದೇ ಮಹಿಳೆ ವಿಶು ಶೆಟ್ಟಿಯವರಲ್ಲಿ ಸಹಾಯ ಕೇಳಿದ್ದರು.

ಸಮಾಜಸೇವಕ ವಿಶು ಶೆಟ್ಟಿ ಸ್ಪಂದಿಸಿ ಜಿಲ್ಲಾಸ್ಪತ್ರೆಗೆ ಕರೆತಂದು ಔಷದೋಪಚಾರ ಮಾಡಿ ಮಾನವೀಯತೆ ಮೆರೆದಿದ್ದಾರೆ.