Home Crime ಉಡುಪಿ : ಭಜರಂಗದಳ ಮುಖಂಡ ಪುನೀತ್ ಅತ್ತಾವರ ಗೆ 3 ತಿಂಗಳು ಉಡುಪಿ ಜಿಲ್ಲೆ ಪ್ರವೇಶ...

ಉಡುಪಿ : ಭಜರಂಗದಳ ಮುಖಂಡ ಪುನೀತ್ ಅತ್ತಾವರ ಗೆ 3 ತಿಂಗಳು ಉಡುಪಿ ಜಿಲ್ಲೆ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ…!!

ಉಡುಪಿ : ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಹಾಗೂ ಸಾರ್ವಜನಿಕ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತ 2023 ರ ಕಲಂ 163 ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ದಿನಾಂಕ: 14.08.2026 ರಿಂದ 13.11.2026 ರವರಗೆ 03 ತಿಂಗಳ ಕಾಲ ಪುನೀತ್ ಅತ್ತಾವರ (ವರ್ಷ: 39, ತಂದೆ: ಮೋಹನ್ ಕೊಟಾರಿ, ವಾಸ: ಬ್ರಹ್ಮ ಸಮಾಜ ಹತ್ತಿರ, ಮುಂಡಪ್ಪ ಕಂಪೌಂಡ್, ಅತ್ತಾವರ, ಮಂಗಳೂರು) ಇವರನ್ನು ಉಡುಪಿ ಜಿಲ್ಲೆಯಾದ್ಯಂತ ಪ್ರವೇಶವನ್ನು ನಿರ್ಬಂಧಿಸಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಆದೇಶಿಸಿರುತ್ತೇನೆ.

ಸದರಿ ನಿರ್ಬಂಧಿತ ಆದೇಶಕ್ಕೆ ಸಂಬಂಧಿಸಿದಂತೆ ನಿಮ್ಮ ಕಡೆಯಿಂದ ಏನಾದರೂ ಆಕ್ಷೇಪಣೆಗಳಿದ್ದಲ್ಲಿ, ಸದರಿ ಆದೇಶವನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಜಾರಿಗೊಳಿಸುವ ಸಿಬ್ಬಂದಿಯವರಲ್ಲಿ ಕೂಡಲೇ ಬರವಣಿಗೆ ರೂಪದಲ್ಲಿ ಅಥವಾ ಅದನ್ನು ಈ ಕಚೇರಿಯ ಈ ಮೇಲ್ udupidc@gmail.com ಗೆ ದಿನಾಂಕ: 13.08.2026 ಅಪರಾಹ್ನ 12:00 ಗಂಟೆಯ ಒಳಗಾಗಿ (12.00 PM) ಲಿಖಿತ ರೂಪದಲ್ಲಿ ಸಲ್ಲಿಸಲು ಸೂಚಿಸಲಾಗಿದೆ.

ನಿಗದಿತ ಸಮಯದೊಳಗೆ ಯಾವುದೇ ಆಕ್ಷೇಪಣೆಗಳು ಸ್ವೀಕೃತವಾಗದಿದ್ದಲ್ಲಿ, ನಿಮ್ಮ ಕಡೆಯಿಂದ ಯಾವುದೇ ಹೇಳಿಕೆ ಅಥವಾ ಆಕ್ಷೇಪಣೆಗಳಿರುವುದಿಲ್ಲವೆಂದು ಪರಿಗಣಿಸಿ ಮುಂದಿನ ನಿಯಮಾನುಸಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.