Home Latest ಉಡುಪಿ ಜಿಲ್ಲಾ ಆಸ್ಪತ್ರೆಯನ್ನು ಆರಂಭಿಸುವ ಬೇಡಿಕೆಯನ್ನಿಟ್ಟು ಅಕ್ಟೋಬರ್ 1ರಿಂದ ಹೋರಾಟ…!!

ಉಡುಪಿ ಜಿಲ್ಲಾ ಆಸ್ಪತ್ರೆಯನ್ನು ಆರಂಭಿಸುವ ಬೇಡಿಕೆಯನ್ನಿಟ್ಟು ಅಕ್ಟೋಬರ್ 1ರಿಂದ ಹೋರಾಟ…!!

ಉಡುಪಿ: ನಗರದ ಅಜ್ಜರಕಾಡಿನಲ್ಲಿ ಜಿಲ್ಲಾಸ್ಪತ್ರೆಗೆಂದು ನೂತನವಾಗಿ ಕಟ್ಟಡವೊಂದನ್ನು ಕಟ್ಟಿ ಒಂದು ವರ್ಷ ಕಳೆದರೂ ಜನರ ಸೇವೆಗೆ ಬಿಟ್ಟು ಕೊಟ್ಟಿಲ್ಲ.ಆಸ್ಪತ್ರೆಗೆ ಬೇಕಾಗಿರುವ ಯಂತ್ರೋಪಕರಣ ವೈದ್ಯರು ಹಾಗೂ ದಾದಿಯರನ್ನು ವ್ಯವಸ್ಥೆಗೊಳಿಸಿ ಸಪ್ಟೆಂಬರ್ 30 ರೊಳಗೆ ಜನರ ಸೇವೆಗೆ ಜಿಲ್ಲಾಸ್ಪತ್ರೆಯನ್ನು ಬಿಟ್ಟು ಕೊಡಬೇಕೆಂಬ ಬೇಡಿಕೆಯನ್ನು ಸಂಘಟನೆ ವತಿಯಿಂದ ಆಗಸ್ಟ್ 24ರಂದು ಪತ್ರಿಕಾಗೋಷ್ಠಿಯ ಮೂಲಕ ಇಡಲಾಗಿತ್ತು.

ಇದಕ್ಕೆ ತಪ್ಪಿದಲ್ಲಿ ಅಕ್ಟೋಬರ್ ಒಂದರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಹಮ್ಮಿಕೊಳ್ಳುವ ಬಗ್ಗೆಯೂ ತಿಳಿಸಲಾಗಿತ್ತು. ಸೆಪ್ಟೆಂಬರ್ 30 ರೊಳಗೆ ಆಸ್ಪತ್ರೆ ಕಾರ್ಯಚರಿಸುವ ಬಗ್ಗೆ ಯಾವುದೇ ಲಕ್ಷಣ ಕಾಣದ ಹಿನ್ನೆಲೆಯಲ್ಲಿ ಸಂಘಟನೆಯು ಸಭೆ ಕರೆದು ಆ ಸಭೆಯಲ್ಲಿ ಅಕ್ಟೋಬರ್ ಒಂದರಿಂದ ಒಂದು ವಾರಗಳ ಕಾಲ ಅಹೋ ರಾತ್ರಿ ಹೋರಾಟ ಕೈಗೊಳ್ಳುವುದಾಗಿ ನಿರ್ಣಯಿಸಲಾಯಿತು.
ಒಂದು ವಾರದೊಳಗೆ ಸರಕಾರ ಯಾ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಸಕಾರಾತ್ಮಕವಾಗಿ ಸ್ಪಂದನೆ ಬರದೇ ಇದ್ದ ಪಕ್ಷದಲ್ಲಿ ಇದೇ ಹೋರಾಟವನ್ನು ಅನಿರ್ದಿಷ್ಟಾವಧಿಗೆ ಮುಂದುವರೆಸುವ ಬಗ್ಗೆ ಯಾ ಮುಂದಿನ ದಿನಗಳಲ್ಲಿ ಬೇರೆ ರೀತಿಯ ಹೋರಾಟ ಕೈಗೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು
ಅನ್ಸಾರ್ ಅಹಮದ್ ಗೌರವಾಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ
(ಪ್ರವೀಣ್ ಶೆಟ್ಟಿ ಬಣ) ಉಡುಪಿ ಜಿಲ್ಲೆ ಇವರು ‌ಹೇಳಿದ್ದಾರೆ.