ಉಡುಪಿ: ಸ್ಟಾಕ್ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಗಳಿಸಬಹುದು ಎನ್ನುವ ಆಮಿಷವೊಡ್ಡಿರುವ ವಂಚಕರು ನಿವೃತ್ತ ಸಿಬ್ಬಂದಿ ಯೊಬ್ಬರಿಗೆ 30,32,000 ರೂ. ವಂಚಿಸಿರುವ ಬಗ್ಗೆ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ ಎಂಐಟಿಯ ನಿವೃತ್ತ ಉದ್ಯೋಗಿ ಉಮಾನಂದ ಕೆ.ವಿ. ಹಣ ಕಳೆದುಕೊಂಡವರು.
ಅವರನ್ನು ವಾಟ್ಸಾಪ್‌ನಲ್ಲಿ ಸಂಪರ್ಕಿಸಿದ್ದ ವಂಚಕ, ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದೆಂದು ಆಮಿಷವೊಡ್ಡಿದ್ದ.
ವಂಚಕರ ಮಾತನ್ನು ನಂಬಿ 2025ರ ನ.6ರಿಂದ ಡಿ.31ರ ವರೆಗೆ ಆರೋಪಿ ಸೂಚಿಸಿದ ನಾನಾ ಖಾತೆಗಳಿಗೆ ಒಟ್ಟು 30,32,000 ರೂ. ಹೂಡಿಕೆ ಮಾಡಿ ದ್ದರು. ಹೂಡಿಕೆ ಮಾಡಿದ ಹಣವನಾಗಲಿ, ಲಾಭಾಂಶವನ್ನಾಗಲಿ ನೀಡದೇ | ವಂಚಿಸಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.



