ಉಡುಪಿ: ಉಡುಪಿ ಶ್ರೀಕೃಷ್ಣ ಮಠಕ್ಕೆ ಮಲೆಯಾಳಂ ನಟ ಹಾಗೂ ಕೇಂದ್ರ ಸಚಿವ ಸುರೇಶ್ ಗೋಪಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ನಟ ಹಾಗೂ ಸಚಿವರನ್ನು ಕೃಷ್ಣಮಠಕ್ಕೆ ದಿವಾನರು ಆದರದಿಂದ ಬರಮಾಡಿಕೊಂಡರು. ಕುಟುಂಬ ಹಾಗೂ ಸ್ನೇಹಿತರ ಜೊತೆಗೆ ಮಠಕ್ಕೆ ಭೇಟಿ ನೀಡಿದ್ದ ಸುರೇಶ್ ಗೋಪಿ ಅವರು ಶ್ರೀಕೃಷ್ಣನ ದರ್ಶನ ಪಡೆದರು.
ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯನ್ನು ನಟ ಭೇಟಿಯಾದರು. ತೀರ್ಥರ ಪರ್ಯಾಯ ಸಮಾಪ್ತಿ ವೇಳೆ ಭೇಟಿ ಮಾಡಲಾಯಿತು. ಕೇಂದ್ರ ಸಚಿವರಿಗೆ ಮಠದ ವತಿಯಿಂದ ಶ್ರೀ ಸುಗುಣೇಂದ್ರ ತೀರ್ಥರು ವಿಶೇಷ ಗೌರವ ಸಲ್ಲಿಸಿದರು.



