ಉಡುಪಿ ಜಿಲ್ಲೆ ಕಾರ್ಕಳದ ಖಡಕ್ ಪೊಲೀಸ್ ಅಧಿಕಾರಿ ಹರ್ಷಾ ಪ್ರಿಯಂವದಾ ವರ್ಗಾವಣೆಯಾಗಿದ್ದು, ಸಿಐಡಿ ಎಸ್ಪಿ ಆಗಿ ಮುಂಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕಾರ್ಕಳದ ಎ ಎಸ್ಪಿಯಾಗಿ, ಉಡುಪಿ ಸೆನ್ ಠಾಣೆಯ ಉಸ್ತುವಾರಿ ಜವಾಬ್ದಾರಿಯನ್ನು ಹೊಂದಿದ್ದ ಅವರು, ಖಡಕ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದವರು.
ಕಾರ್ಕಳದ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಕಠಿಣ ಕ್ರಮಗಳ ಮೂಲಕ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಿದ್ದರು.



